ಕೊಡೇಕಲ್ ಕಸ್ತೂರಬಾ ಗಾಂಧೀಜಿ ಶಾಲೆಯಲ್ಲಿ ಮಹಿಳಾ ದಿನಾಚರಣೆ

ಹುಣಸಗಿ :ಮಾ.11: ಸಮೀಪದ ಕೊಡೇಕಲ್ ಗ್ರಾಮದ ಕಸ್ತೂರಬಾ ಗಾಂಧೀ ಬಾಲಕಿಯರ ವಸತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಾಚಾರ್ಯೆ ರತ್ನಮ್ಮ ಪೂಜಾರಿ, ಪುರುಷರಷ್ಟೇ ಮಹಿಳೆಯೂ ಸಮಾನಳು ಹೆಣ್ಣು ಮಕ್ಕಳಿಗೆ ತಮ್ಮದೇ ಪಾತ್ರವಿದ್ದು ಯಶಸ್ವಿಯಾಗಿ ನಿರ್ವಹಿಸಿರಿ ಎಂದು ಕರೆ ನೀಡಿದರು. ಮಹಿಳಾ ದಿನಾಚರಣೆ ಮಹಿಳೆಯರಿಗೆ ನಾಡಹಬ್ಬದಷ್ಟೇ ವಿಶೇಷ ದಿನವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಗೀತಾ, ಈರಮ್ಮ ಕುಂಬಾರ, ಪರವೀನಾ ಬೇಗಂ, ಕೀರ್ತಿ ಜೋಶಿ, ಶಕುಂತಲಾ ಗಡ್ಡದ, ರೇಣುಕಾ, ಮೈತ್ರಾ ಮಾನೆ, ವಿಜಯಲಕ್ಷ್ಮಿ, ನೀಲಮ್ಮ ಮಂಟೇ ಸೇರಿದಂತೆ ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು