ಕೊಡೆಕಲ್ ಬಸವ ಶ್ರೀ ರಾಜ್ಯ ಪ್ರಶಸ್ತಿ ಪುರಸ್ಕಾರ

ವಿಜಯಪುರ,ಏ.16:ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ಭಾರತೀಯ ಯುವಜನ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಶ್ರೀ ಕೊಡೆಕಲ್ ಬಸವೇಶ್ವರ ಜಾತ್ರಾ ನಿಮಿತ್ಯವಾಗಿ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊಡೆಕಲ್ ಬಸವ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವನ್ನು ಕೊಡೆಕಲ್ ಮಠದ ಪೂಜ್ಯಶ್ರೀ ಸಂಗಯ್ಯ ಸ್ವಾಮಿಗಳು ವೀರಸಂಗಯ್ಯ ಕೊಡೆಕಲ್ ಮಠ ಸ್ವಾಮಿಗಳು ಹಾಗೂ ಪರಶುರಾಮ ಪೂಜಾರಿ ಮಣ್ಣೂರ ಬೀರಪ್ಪ ಪೂಜಾರಿ ನಂದಿಹಾಳ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ರಂಗಭೂಮಿ ಚಿತ್ರಕಲೆ, ಕ್ರೀಡೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಯಲಬುರ್ಗಾದ ಕಳಕಪ್ಪ ತಳವಾರ, ಈರಯ್ಯ ಮಠಪತಿ, ಕೊಪ್ಪಳದ ಅಶೋಕ ಅರಕೇರಿ, ಸಾವಿತ್ರಿ ವಗ್ಗರ, ಲಿಂಗರಾಜ ಬಿದರಕುಂದಿ, ಮಹಾದೇವ ರಾಠೋಡ, ಡಾ. ಪ್ರಭು ಮಂಕಣಿ, ಮಂಜುಳಾ ಶಾಸ್ತ್ರಿ, ಅಶೋಕ ಎಲೇರಿ, ಲಕ್ಷ್ಮಣ ಹಡಪದ, ಕು. ಅನಿತಾ ದೊಡ್ಡಮನಿ, ಶಿವಶಂಕರ ಅಂಬಿಗೇರ, ಶಂಕರಗೌಡ ಬಿರಾದಾರ ಸೇರಿದಂತೆ ವಿವಿಧ ಗಣ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನ್ಯಾಯವಾದಿ ಹಾಗೂ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ, ಸಾಹಿತಿ ಲಾಯಪ್ಪ ಇಂಗಳೆ, ಯಲಬುರ್ಗಾದ ಪತ್ರಕರ್ತ ವಿ.ಎಸ್. ಶಿವಪ್ಪಯ್ಯನಮಠ, ವಿನಾಯಕ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಪಾಟೀಲ, ಪ್ರಕಾಶ ಕೋಲ್ಕಾರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು