ಕೊಡದೂರ: 5 ದಿನಗಳ ಕಾಲ ಜಾತ್ರಾ ಅದ್ದೂರಿ ಮಹೋತ್ಸವ

ಕಾಳಗಿ:ಎ.22: ತಾಲೂಕಿನ ಕೊಡದೂರ ಗ್ರಾಮದ ಶ್ರೀ ಕಂಠಿಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಮೂರು ವರ್ಷಕೊಮ್ಮೆ ನಡೆಯುವ ಶ್ರೀ ಮರಗಮ್ಮ ದೇವಿ ಕಾರ್ಯ ಬಹು ವಿಜೃಂಭಣೆಯಿಂದ ಜರುಗುವುದು ಎಂದು ಜಾತ್ರೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿ ಉದ್ಧೇಶಿಸಿ ಮಾತನಾಡಿದ ಪ್ರಮುಖರು, ಜಾತ್ರೆ ನಿಮಿತ್ಯವಾಗಿ ದಿ.22 ರಿಂದ 26 ರವರೆಗೆ ಪ್ರತಿದಿನ ಸಾಯಂಕಾಲ ಪಲ್ಲಕ್ಕಿ ಮೆರವಣಿಗೆ ಹಾಗೂ ಸಂಜೆ 8 ರಿಂದ 10 ವರೆಗೆ ವೇದಮೂರ್ತಿ ಮಲ್ಲಯ್ಯ ಸ್ವಾಮಿ ಶಾಸ್ತ್ರೀ ವಡಗೇರಾ ಅವರಿಂದ ಪ್ರವಚನ ಜರುಗುವುದು.
ದಿ.25 ರಂದು ಬೆ.11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅನ್ನ ಸಂತರ್ಪಣೆ, ದಿ.26 ರಂದು ಬೆ. 5 ಗಂಟೆಗೆ ಗ್ರಾಮದ ಬೀದಿಗಳಲ್ಲಿ ಪುರವಂತರ ಕುಣಿತ ಮತ್ತು 10 ಗಂಟೆಗೆ ಅಗ್ನಿ ಪ್ರವೇಶ, ಸಾಯಂಕಾಲ 6ಗಂಟೆಗೆ ಶ್ರೀ ಕಂಠಿಬಸವೇಶ್ವರ ರಥೋತ್ಸವ ಜರುಗುವುದು.
ದಿ.27 ರಂದು ಬೆಳಿಗ್ಗೆ ಶ್ರೀ ಮರಗಮ್ಮ ದೇವಿಗೆ ಅಭಿಷೇಕ, ಪೂಜೆ ಜರುಗುವುದು, ಮಧ್ಯಾಹ್ನ 3 ಗಂಟೆಗೆ ಗ್ರಾಮಸ್ಥರ ಮತ್ತು ಭಕ್ತರ ಸಮ್ಮುಖದಲ್ಲಿ ಬಡಿಗೇರ ಮನೆಯಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು. ತದನಂತರ ಗ್ರಾಮದ ವತಿಯಿಂದ ಸಂಜೆ 6 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಬಡಿಗೇರ ಮನೆಯಿಂದ ಆರಂಭಗೊಳ್ಳುವ ಶ್ರೀ ಮರಗಮ್ಮ ದೇವಿಯ ಮೆರವಣಿಗೆಯು ರಾತ್ರಿ 11 ಗಂಟೆಗೆ ಮರಗಮ್ಮ ಗುಡಿ ತಲುಪುವುದು. ನಂತರ ಮಹಾ ಮಂಗಳಾರತಿ ನಡೆಯುವುದು. ದಿ. 28 ರಂದು ಬೆ.10 ಗಂಟೆಗೆ ಮರಗಮ್ಮ ದೇವಿಗೆ ಊರ ವತಿಯಿಂದ ನೈವೇದ್ಯ ಮತ್ತು ಪ್ರಸಾದ ಜರುಗುವುದು. ದಿ. 29 ರಂದು ಜಂಗಿ ಕುಸ್ತಿ ಜರುಗುವುದು. ಶ್ರೀ ಕಂಠಿಬಸವೇಶ್ವರ ಆದಿ ಶಕ್ತಿ ಮರಗಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಆಂದ್ರ, ತೆಲಾಂಗಣ. ಮಹಾರಾಷ್ಟ ಭಕ್ರರು ಸೇರಲಿದ್ದು, ಬರುವ ಅಸಂಖ್ಯಾತ ಯಾತ್ರಿಕರು ಸಾವಧಾನದಿಂದ ದರ್ಶನ ಪಡೆಯಬೇಕು ಎಂದು ತಿಳಿಸಿದ್ದಾರೆ.
ಜಾತ್ರಾ ಸಮಿತಿ ಅಧ್ಯಕ್ಷ ಭೀಮರಾವ ಮಾಲಿಪಾಟೀಲ, ಉಪಾಧ್ಯಕ್ಷ ಗಣಪತಿ ಹಾಳಕಾಯಿ, ಅಪ್ಪರಾವ ಈಶ್ವರಗೊಂಡ, ಸಿದ್ದಣ್ಣಗೌಡ ಪೆÇೀಲಿಸ ಪಾಟೀಲ್, ರಾಜಶೇಖರ ರಾಜಾಪೂರ, ನಾಗೀಂದ್ರಪ್ಪ ಪೇಚೆಟ್ಟಿ, ಶರಣು ಮಜ್ಜಗಿ, ಶ್ರೀಮಂತ ಚಂದಾ, ನೀಲಕಂಠರಾವ ಪೆÇೀಲಿಸ ಪಾಟೀಲ್, ಶಿವಕುಮಾರ ರಾಜಾಪುರ, ಶ್ರೀನಿವಾಸ ಕುಲಕರ್ಣಿ, ನಾಗೇಂದ್ರ ಚಿಂದಿ, ಬಂಡು ಗದ್ದಿ, ಸಂತೋಷ ಜೀವಣಗಿ, ಶರಣು ಸಜ್ಜನಶೆಟ್ಟಿ, ಗುರುನಾಥ ಹೊಸಮನಿ, ರಮೇಶ ಜನಗೊಂಡ, ಬಸವರಾಜ ಮೇಲಕೇರಿ ಇದ್ದರು.