
(ಸಂಜೆವಾಣಿ ವಾರ್ತೆ)
ಕಾಳಗಿ.ಅ.3. ತಾಲೂಕಿನ ಕೊಡದೂರ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಬುಧವಾರ ನಡೆದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎರಡು ಸ್ಥಾನಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಅಧ್ಯಕ್ಷರಾಗಿ ಮಂಜುಳಾ ಮಲ್ಲಪ್ಪ ದಿಗ್ಗಾಂವ್, ಉಪಾಧ್ಯಕ್ಷರಾಗಿ ರೇಣುಕಾ ಕಿಶಾನ್ ರಾಠೋಡ ಆಯ್ಕೆಯಾದರು.
ಬುಧವಾರ ಕೊಡದೂರ ಗ್ರಾಪಂ ಸಭಾಂಗಣದಲ್ಲಿ ಚುನಾವಣೆ ಅಧಿಕಾರಿ ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗೂಲಕರ್, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ಪಿಡಿಓ ಟೈಸನ್ ಸಾಮ್ಸನ್ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.
18 ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಹಿಂದೂಗಳ ವರ್ಗ ಅ ಮಹಿಳೆ ಹಾಗೂ ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳಾ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಲ್ಲಪ್ಪ ದಿಗ್ಗಾಂವ್ ಹಾಗೂ ಶರೀನಾಬೇಗಂ ಅಕ್ರಂಅಲಿ ಸ್ಪರ್ಧಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ಕಿಶಾನ್ ರಾಠೋಡ ಹಾಗೂ ಅಶ್ವಿನಿ ಶಂಕರ ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಮಲ್ಲಪ್ಪ ದಿಗ್ಗಾಂವ್ 11ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶರೀನಾಬೇಗಂ ಅಕ್ರಂಅಲಿ 7 ಮತ ಪಡೆದರು ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಲ್ಲಪ್ಪ ದಿಗ್ಗಾಂವ್ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೇಣುಕಾ ಕಿಶಾನ್ ರಾಠೋಡ 10ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶ್ವಿನಿ ಶಂಕರ 8ಮತ ಪಡೆದರು. ಹೀಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾಚಾರ್ಯ ಕಿಶಾನ್ ರಾಠೋಡ ಆಯ್ಕೆಯಾದರು.
ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಎರಡು ಸ್ಥಾನಕ್ಕೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದ ಫಲಿತಾಂಶ ಹೊರಬಿಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಭೀಮರಾವ್ ಟಿಟಿ ಮಾತನಾಡಿ, ಕೊಡದೂರ ಗ್ರಾಪಂ ಕಾಂಗ್ರೆಸ್ ಭದ್ರ ಕೊಟೆಯಾಗಿದೆ, ಈ ಬಾರಿಯು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ಲೋಕಸಭಾ, ಜಿಪಂ, ತಾಪಂ ಚುನಾವಣೆಗೆ ತಯಾರಿ ಮಾಡಬೇಕಾಗಿದೆ ಎಂದರು.
ಗ್ರಾಪಂ ಸದಸ್ಯರಾದ ಬಸವರಾಜ ಜೀವಣಗಿ, ಸಂತೋಷ ಚವ್ಹಾಣ, ಮಡಿವಾಳಪ್ಪ ಗುಂಡಗುರ್ತಿ, ವೀರಭದ್ರಪ್ಪ ನಿಂಗದಳ್ಳಿ, ವಿಷ್ಣುಕಾಂತ ಮೇಲಕೇರಿ, ಸಿದ್ದಮ್ಮ ಪೂಜಾರಿ, ರಾಜೇಶ್ವರಿ ಮೇಲಕೇರಿ, ಜಗನ್ನಾಥ ಗಡ್ಡದ, ನಿರ್ಮಲಾ ಕೊಟನೂರ, ಕಾಂಗ್ರೆಸ್ ಮುಖಂಡರಾದ ರಾಘವೇಂದ್ರ ಗುತ್ತೇದಾರ, ಶಿವಾನಂದ ಮಜ್ಜಿಗಿ, ಸುರೇಶ ಪವಾರ, ರಮೇಶ ಜಾಧವ, ಹಾಜೀಮೀಯ್ಯ ಭಂಟನಳ್ಳಿ, ವೇದಪ್ರಕಾಶ ಮೊಟಗಿ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ಮಜ್ಜಿಗಿ, ಗಣಪತಿ ಹಾಳಕಾಯಿ, ಸೂರ್ಯಕಾಂತ ಕಲ್ಲೂರ, ಗಂಗಾಧರ ಮೈಲಾರ, ಅಪ್ಪಾರಾವ ಈಶ್ವರಗೊಂಡ, ಪ್ರಶಾಂತ ರಾಜಾಪೂರ, ಪ್ರಭಾಕರ ಕುಲಕರ್ಣಿ, ಆನಂದ ಮಗೊಂಡ, ಬಂಡಪ್ಪ ಗದ್ದಿ,ಜನಾರ್ದನ ಕದ್ದರಗಿ, ಮೊಹನ ಚಿನ್ನ, ಯಲ್ಲಾಲಿಂಗ ಗಂಗಪ್ಪಗೋಳ, ಅವಿನಾಶ ಮೂಲಿಮನಿ, ಪ್ರಕಾಶ ಮೇಲಕೇರಿ, ಸೂರ್ಯಕಾಂತ ಮಗೋಂಡ, ಶರಣಪ್ಪ ಯಡಗಿ, ಮನೋಜ ಕೊಟನೂರ, ಬಸವರಾಜ ಮೇಲಕೇರಿ, ಮಲ್ಲಪ್ಪ ದಿಗ್ಗಾಂವ್, ದೇವಿಂದ್ರಪ್ಪ ಸಾಲಹಳ್ಳಿ, ರಾಜು ಚವ್ಹಾಣ, ಯಲ್ಲಪ್ಪ ಚಿನ್ನಾ ಸೇರಿದಂತೆ ಇತರರು ಇದ್ದರು. ಕಾಳಗಿ ಪೆÇಲೀಸ್ ಠಾಣೆ ಎಎ??? ಅಶ್ವತರಾವ ಕುಲಕರ್ಣಿ ಬಿಗಿ ಪೆÇಲೀಸ್ ಬಂದೋಬಸ್ತ್ ಒದಗಿಸಿದರು.