ಕೊಡದೂರ ಕಂಠಿಬಸವೇಶ್ವರ ಜಾತ್ರೆ ಸಂಪನ್ನ

ಕಾಳಗಿ.ಮೇ.18: ತಾಲ್ಲೂಕಿನ ಕೊಡದೂರ ಗ್ರಾಮದ ಆರಾಧ್ಯ ದೈವ ಕಂಠಿಬಸವೇಶ್ವರ ಸ್ವಾಮಿಯ ಪರಂಪರೆಯ ಅಗ್ನಿ, ರಥೋತ್ಸವ ಕಾರ್ಯಕ್ರಮ ಸಹಸ್ರಾರು ಭಕ್ತರ ನಡುವೆ ಬುಧವಾರ ಸಂಭ್ರಮ ಸಡಗರದಿಂದ ನೆರವೇರಿಸಿ ಜಾತ್ರೆ ಯಶಸ್ವಿಯಾಗಿ ನಡೆಯಿತು.

ಜಾತ್ರೆಯ ಅಂಗವಾಗಿ ಬೆಳಿಗ್ಗೆ ಕರ್ತೃ ಕಂಠಿಬಸವೇಶ್ವರ ವಿಗ್ರಹಕ್ಕೆ ಗ್ರಾಮಸ್ಥರಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು. ಹೂಗರಾ ಮನೆಯಿಂದ ಪಲ್ಲಕ್ಕಿಯಲ್ಲಿ ಉತ್ಸವದ ಮೂರ್ತಿಯನ್ನು ತೆಗೆದುಕೊಂಡು ಗ್ರಾಮದ ಬಿದೀಗಳಲ್ಲಿ ಪುರವಂತರ ವೀರಗಾಸೆ ನೃತ್ಯದೊಂದಿಗೆ ಸಕಲ ಮಂಗಳ ವಾದ್ಯ ಮೆರವಣಿಗೆ ಮೂಲಕ ದೇವಸ್ಥಾನದ ಪ್ರಣಾಂಗಣಕ್ಕೆ ತಲುಪುತ್ತದೆ. ನಂತರ ಸೇಡಂ ಪುರವಂತ ಸ್ವಾಮಿ, ಹಂಗನಳ್ಳಿಯ ವಿಶ್ವಕರ್ಮ ಸ್ವಾಮೀಜಿ ರವರ ನೇತೃತ್ವದಲ್ಲಿ ಪರಂಪರೆಯ ಅಗ್ನಿ ಹಾಯುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು, ಭಕ್ತರೆಲ್ಲರು ಸೇರಿ ಅಗ್ನಿ ಪ್ರವೇಶ ಮಾಡಿ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು.

ಸಾಯಂಕಾಲ 6 ಗಂಟೆಗೆ ಗ್ರಾಮದ ಪ್ರತಿಷ್ಠಿತ ಹಾಸೇಟ್ಟಿ ಗೌಡರ ಮನೆತನದಿಂದ ಕುಂಭ ಕಳಶ ರಥದ ಮಿಣಿಯನ್ನು ತೆಗೆದುಕೊಂಡು ಗ್ರಾಮದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡುತ್ತ ರಥದತ್ತ ತೆರಳುವರು. ರಥಕ್ಕೆ ಐದು ಪ್ರದಕ್ಷೀಣೆ ಹಾಕುತ್ತಿದ್ದಂತೆ ಗ್ರಾಮ ಪುರೋಹಿತ ರಮೇಶ ಕುಲಕರ್ಣಿ ಅರ್ಚಕ ಅಣಿವೀರಯ್ಯ ಸ್ಥಾವರಮಠ, ಚನ್ನಪ್ಪ ವಿಶ್ವಕರ್ಮ, ಬಸವರಾಜ ಈಶ್ವರಗೊಂಡ ಗ್ರಾಮಸ್ಥೆಲ್ಲರು ರಥೋತ್ಸವಕ್ಕೆ ಚಾಲನೆ ನೀಡುವರು. ನೆರದ ಭಕ್ತರೆಲ್ಲರು ರಥೋತ್ಸವಕ್ಕೆ ಉತ್ತತ್ತಿ ಬಾಳೆಹಣ್ಣು ಸಮರ್ಪಿಸಿ ಕೃತಾರ್ತರಾದರು. ಕೊಡದೂರ ಭರತನೂರ ಗ್ರಾಮಸ್ಥರ ವತಿಯಿಂದ ರಾತ್ರಿ 10 ಗಂಟೆಗೆ ಹೆತ್ತವಳ ಹಾಲು ವಿಷವಾಯಿತು ಎಂಬ ಕಥೆಯ ಆಧಾರಿತ ಸುಂದರ ಸಾಮಾಜಿಕ ನಾಟಕ ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು. ಕಾಳಗಿ ಪಿಎಸ್‍ಐ ವಿಶ್ವನಾಥ ಬಾಖಳೆ, ಎಎಸ್‍ಐ, ಎಫ್.ಎ.ಖಾನ ನೇತೃತ್ವದಲ್ಲಿ ಜಾತ್ರೆ ಕಾರ್ಯಕ್ರಮಕ್ಕೆ ಸಕಲ ಪೆÇಲೀಸ್ ಬಂದೋಬಸ್ತ್ ವದಗಿಸಿದರು.

ಶಾಸಕ ಡಾ.ಅವಿನಾಶ ಜಾಧವ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ದಿಗ್ಗಾವ, ಜಾತ್ರಾ ಕಮೀಟಿ ಅಧ್ಯಕ್ಷ ಭೀಮರಾವ ಮಾಲಿಪಾಟೀಲ, ಡಾ.ಶಿವಾನಂದ ಮಜ್ಜಿಗೆ, ಗಣಪತಿ ಹಾಳಕಾಯಿ, ಸಿದ್ದಣಗೌಡ ಪೆÇಲೀಸ್‍ಪಾಟೀಲ, ಜನಾರ್ದನ ಖದ್ದರಗಿ, ಯುವ ಅಧ್ಯಕ್ಷ ಶರಣು ಮಜ್ಜಿಗೆ, ಪ್ರಶಾಂತ ರಾಜಾಪುರ, ಮುರಳಿಧರ ಖದ್ದರಗಿ, ಕಂಠುಗೌಡ ಪಾಟೀಲ, ಚಂದ್ರಕಾಂತ ರಾಜಾಪಯರ, ಸುಸೀಲ ಖಾಜಾಪುರ, ಉಮೇಶ್ ಮಂಗೋಂಡ, ರಾಘವೇಂದ್ರ ಕುಲಕರ್ಣಿ, ವೀರಭದ್ರ ಈಶ್ವರಗೊಂಡ, ನಾಗೇಂದ್ರ ರುದನೂರ, ರಾಜಶೇಖರ ರಾಜಾಪೂರ, ಶಿವಕುಮಾರ ಕೊಡಸಾಲಿ, ಬಂಡು ಗದ್ದಿ, ಆನಂದ ಮಂಗೊಂಡ, ಬಸವರಾಜ ಜೀವಣಗಿ, ಮುರಘೇಂದ್ರ ಭರತನೂರ, ಸೂರ್ಯಕಾಂತ ಕಲ್ಲೂರ, ಶರಣು ಚಂದಾ, ಮಡಿವಾಳ ಗುಂಡಗುರ್ತಿ, ಪ್ರಕಾಶ ಮೇಲ್ಕೇರಿ, ಸದ್ದಾಂ ಪಟೇಲ, ಚಂದ್ರು ಪೆಚೆಟ್ಟಿ, ಲೊಕೇಶ ಕಲ್ಲೂರ, ನಾಟಕಕಾರ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಸೇರಿ ಅನೇರಿದ್ದರು.