ಕೊಡದಗುಡ್ಡ ವೀರಭದ್ರಸ್ವಾಮಿಯ ಮಹಾರಥೋತ್ಸವ

ಜಗಳೂರು.ಮಾ.೩೦;: ತಾಲ್ಲೂಕಿನ ಪ್ರಸಿದ್ದ ಕೊಡದಗುಡ್ಡ ವೀರಭದ್ರಸ್ವಾಮಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ  ವಿಜೃಂಭಣೆಯಿಂದ ಜರುಗಿತು.ಕೊಡದಗುಡ್ಡ ವೀರಭದ್ರಸ್ವಾಮಿಯ ಭಾವುಟವನ್ನು ದೇವಿಕೆರೆ ಶರಬೇಂದ್ರ 2.28 ಲಕ್ಷ ರೂ.ಗಳಿಗೆ ಹರಾಜು ಮಾಡಿಕೊಂಡರು. ಸ್ವಾಮಿಯ ಭಾವುಟ ಹರಾಜು ಹಾಗುತ್ತಿದ್ದಂತೆ ನೆರದಿದ್ದ ಭಕ್ತರು ರಥೋತ್ಸವದ ಗಾಲಿಗೆ ಕಾಯಿ ಒಡೆದು, ಕಳಸ ಹಾಗೂ ರಥೋತ್ವಸಕ್ಕೆ ಬಾಳೆಹಣ್ಣು ಮಂಡಿಕ್ಕಿ ಹಾಕುವ ಮೂಲಕವೀರಭದ್ರಸ್ವಾಮಿಯ ಘೋಷಣೆಯೊಂದಿಗೆ ರಥೋತ್ಸವ ವಿಜ್ರಂಭಣೆಯಿಂದ ಜರುಗಿತು.ರಥೋತ್ಸವಕ್ಕೆ ದಾವಣಗರೆ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ವಾಹನದ ಮೂಲಕ ಆಗಮಿಸಿದ್ದರು. ಕೆಲವು ಭಕ್ತರು ದಾವಣಗೆರೆ, ಕೊಟ್ಟೂರು ,ಜಗಳೂರು ಸುತ್ತಮುತ್ತಲಿನ ಅನೇಕ ಮಹಿಳೆಯರು, ಪುರುಷರು, ಮಕ್ಕಳು ಸುಡು ಬಿಸುಲೆನ್ನದೇ ನೆಡದು ಕೊಂಡು ಬಂದು ದೇವರ ದರ್ಶನ ಪಡೆದರು. ಕೊಡದಗುಡ್ಡದ ವೀರಭದ್ರಸ್ವಾಮಿ ನಂಬಿಕೊಂಡು ಬಂದ ಭಕ್ತರು ಸಲ್ಲಿಸಿದ ಬೇಡಿಕೆಗಳು ಈಡೇರಿವೆ. ಪ್ರತಿ ವರ್ಷ ನಡೆಯುವ ಜಾತ್ರೆಗೆ ದೂರುದ ಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕ ಬಂದು ತಮ್ಮ ಹರಕೆಗಳನ್ನು ಸಲ್ಲಿಸುವ ಪದ್ದತಿ ಈಗಲು ಮುಂದುವರೆದಿದೆ. ಕೊರೊನಾ ಭಯಇಲ್ಲ: ರಥೋತ್ಸವಕ್ಕೆ ಆಗಮಿಸಿದ ಭಕ್ತರಲ್ಲಿ ಕೊರೊನಾ ಭಯ ಇರಲಿಲ್ಲ. ಮಾಸ್ಕ್ ಹಾಕದೇ ರಾಜಾರೋಷವಾಗಿ ಓಡಾಡುತ್ತಿದ್ದರು. ಕೊಡದಗುಡ್ಡ ಗ್ರಾಮದ ಕೆಳಗಡೆಯಿಂದ 225 ಮೆಟ್ಟಿಲುಗಳ ಮೂಲಕ ಎತ್ತರದ ಕೊಡದಗುಡ್ಡ ಬೆಟ್ಟದ ಮೇಲೆ ನೆಲೆಸಿರುವ ವೀರಭದ್ರಸ್ವಾಮಿಯ ದರ್ಶನವನ್ನು ಭಕ್ತರು ಸಾಲು ಸಾಲಾಗಿ ನಿಂತು ದೇವರ ದರ್ಶನ ಪಡಯುತ್ತಿದ್ದರು. ಬಸವಣ್ಣನ ಗುಡಿಗೆ ನಂತರ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕಾಳಿಕಾ ದೇವಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುವುದು ಕಂಡು ಬಂದಿತು. ಕೊರೋನಾ ಹಿನ್ನಲೆಯಲ್ಲಿ ರಥತ್ಸವ ಸಂದರ್ಭದಲ್ಲಿ ಪೌಳಿಗಳನ್ನು ಮುಚ್ಚಲಾಗಿತ್ತು. ನಂತರ ಪೌಳಿಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಲಾಯಿತು. ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್, ದೇವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವಪ್ಪ, ರವಿಚಂದ್ರ, ವೀರಸ್ವಾಮಿ, ಡಿ.ವಿ.ನಾಗಪ್ಪ, ಬೈರೇಶ್, ಚಟನಹಳ್ಳಿರಾಜಪ್ಪ, ನಾಗರಾಜ, ಬಾಬು, ವೆಂಕಟೇಶ್, ಗಿರೀಶ್ ಒಡೆಯರ್, ದೇವಿಕೆರೆಎಲ್.ಐ.ಸಿ. ತಿಪ್ಪೇಸ್ವಾಮಿ, ಉಮೇಶ್, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸರ್ವ ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಇತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.