ಕೊಡಗು ಜಿಲ್ಲೆ ಲಾಕ್‌ಡೌನ್ ಬಿಗಿ: ಪೆರಾಜೆಯಲ್ಲಿ ಪೊಲೀಸ್ ತಪಾಸಣೆ

ಸುಳ್ಯ , ಮೇ ೨೮- ಕೊಡಗು ಜಿಲ್ಲೆಯ ಕಾನೂನು ಸೂಕ್ತ ರೀತಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಜಾರಿಗೆ ತರುವ ಉದ್ದೇಶದಿಂದ ಪೆರಾಜೆ ಗ್ರಾಮದಲ್ಲಿ ಅನಗತ್ಯವಾಗಿ ನಿಗದಿದ ಸಮಯ ಬಿಟ್ಟು ಪೇಟೆಗೆ ಓಡಾಟ ನಡೆಸುವವರ ವಾಹನ ತಪಾಸಣೆಯನ್ನ ಸಂಪಾಜೆ ಉಪ ಠಾಣಾಧಿಕಾರಿ ಶ್ರೀಧರ್ ಮತ್ತೆ ಸಿಬ್ಬಂದಿ ನಡೆಸಿ ಜನರಿಗೆ ಎಚ್ಚರಿಕೆ ನೀಡಿದರು.
ವಾರದ ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ ೧೦.೦೦ರ ತನಕ ಮಾತ್ರ ಅಗತ್ಯ ವಸ್ತುಗಳ ಕೊಳ್ಳಲು ಅವಕಾಶವಿದ್ದು. ಉಳಿದ ಸಮಯದಲ್ಲಿ ತುರ್ತು ಅಗತ್ಯ ಸೇವೆ ಬಿಟ್ಟು ಉಳಿದವರಿಗೆ ಅವಕಾಶ ಇಲ್ಲ.ಎಲ್ಲರೂ ಕಾನೂನು ಪಾಲಿಸಿ ಇಲಾಖೆ ಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ನಾಳೆಯಿಂದ ಪ್ರತಿ ದಿನ ತಪಾಸಣೆ ನಡೆಸಲಾಗುವುದು, ಕೊರೋನೋ ಮಾರ್ಗಸೂಚಿ ಉಲ್ಲಂ ಘನೆ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.