ಕೊಟ್ಡೂರು   ರಿಯಲ್ ಎಸ್ಟೇಟ್ ಉದ್ಯಮಿ ಹಾಲೇಶ್   ಅಪರಣ 20 ಲಕ್ಷ ಪಡೆದು ಬಿಡುಗಡೆ 

ಸಂಜೆವಾಣಿ ವಾರ್ತೆ:

ಕೊಟ್ಟೂರು ಜು 21:  ನಿನ್ನೆ ಬೆಳಿಗ್ಗೆ ಇಲ್ಲಿನ  ರಿಯಲ್ ಎಸ್ಟೇಟ್ ಉದ್ಯಮಿಯಾದ ಹಾಲೇಶ್ ಅವರನ್ನು ಅಪಹರಣ ಮಾಡಿರುವ  ಘಟನೆ ನಡೆದಿದೆ.

  ಕಾರನಲ್ಲಿ ಬಂದ  ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ನಿವೇಶನ  ಕೊಡಿಸುವಂತೆ ಕೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅಪಹರಣ ಮಾಡಿದ್ದಾರೆ. ದಾರಿಯ ಮಧ್ಯದಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳು ಬಂದು ಸೇರ್ಪಡೆಯಾಗಿದ್ದಾರೆ. 

        ದಾವಣಗೆರೆಗೆ ಕರೆದುಕೊಂಡು ಹೋಗಿ ಆ ವ್ಯಕ್ತಿಗೆ ಮಾರಕಸ್ತ್ರವನ್ನು ತೋರಿಸಿ 80 ಲಕ್ಷದ ಹಣದ ಬೇಡಿಕೆಯನ್ನು ಇಟ್ಟಿದ್ದಾರೆ.   20 ಲಕ್ಷ ಹಣವನ್ನು ಕೊಡುವುದಾಗಿ ಒಪ್ಪಿಕೊಂಡಿದ್ದರು ಆಗ ಆ ನಾಲ್ವರು ವ್ಯಕ್ತಿಗಳು ಕೊಟ್ಟೂರಿಗೆ  ಅವರನ್ನು ಕರೆ ತಂದು 20 ಲಕ್ಷವನ್ನು  ತೆಗೆದುಕೊಂಡು ಹಾಲೇಶ್ ಅವರನ್ನು ಕಾರಿನಿಂದ ಬಿಟ್ಟು  ಹೋಗಿದ್ದಾರೆ  ಎಂದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರ  ತನಿಖೆಯನ್ನು ಮಾಡಲು ಮೂರು ತನಿಖಾ ದಳವನ್ನು  ರಚನೆ ಮಾಡಲಾಗಿದೆ. ಆದಷ್ಟು ಬೇಗ ಆ ವ್ಯಕ್ತಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಲಾಗುವುದು ಎಂದು ವಿಜಯನಗರ ಜಿಲ್ಲೆಯ ಎಸ್ಪಿ ಡಾ. ಅರುಣ್ ರವರು ಸುದ್ದಿಗಾರರಿಗೆ ಇಂದು ತಿಳಿಸಿದ್ದಾರೆ.