ಕೊಟ್ಟ ಹಣ ಮರಳಿ ಕೇಳಿದಕ್ಕೆ ಸ್ನೇಹಿತನಿಗೆ ಗೂಸಾ

ಕಲಬುರಗಿ,ಆ.13-ಕೊಟ್ಟ ಹಣ ಮರಳಿ ಕೇಳಿದಕ್ಕೆ ಸ್ನೇಹಿತನ ಮೇಲೆ ಆತನ ಸ್ನೇಹಿತ ಮತ್ತು ಇತರ ಮೂವರು ಅಪರಿಚಿತರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಶಿವಾಜಿ ನಗರ ಬಡಾವಣೆಯ ಭರತ ಕಟ್ಟಿಮನಿ ಸ್ನೇಹಿತ ಚಂದ್ರಕಾಂತ ಎಂಬಾತನಿಗೆ 1000 ರೂ.ನೀಡಿದ್ದ. ಹಣ ಪಡೆದ ಚಂದ್ರಕಾಂತ ಬಹಳ ದಿನಗಳಾದರೂ ಹಣ ಮರಳಿ ಕೊಡದೇ ಇರುವುದಕ್ಕೆ ಭರತ ಹಣ ಕೊಡುವಂತೆ ಕೇಳಿದ್ದಾನೆ. ಇದರಿಂದ ಕುಪಿತನಾದ ಚಂದ್ರಕಾಂತ ಆತನನ್ನು ಹಣ ಕೊಡುವುದಾಗಿ ಹೇಳಿ ಸರ್ಕಾರಿ ಪದವಿ ಕಾಲೇಜು ಬಳಿ ಕರೆದು ಜಗಳ ತೆಗೆದಿದ್ದಾನೆ. ಅಲ್ಲದೆ ಭರತ ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋಗುವಾಗ ಕರೆದು ಮೂವರು ಅಪರಿಚಿತರೊಂದಿಗೆ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.