ಕೊಟ್ಟ ಮಾತು ಎಂದೂ ತಪ್ಪುವುದಿಲ್ಲ – ಶಿವರಾಜ್ ಪಾಟೀಲ್

ರಾಯಚೂರು,ಮೇ.೦೧- ನಗರದ ವಾಡ್೯ ನಂ.೩೫ ರಾಂಪೂರಿನಲ್ಲಿಂದು ಡಾ.ಶಿವರಾಜ್ ಪಾಟೀಲ್ ಅವರಿಂದು ಭರ್ಜರಿ ಪ್ರಚಾರ ಕೈಗೊಂಡರು.
ಬಾಬು ಜೀವನರಾವ್ ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಭವ್ಯ ಮೆರವಣಿಗೆಯಲ್ಲ ಮೂಲಕ ಜನರು ಶಾಸಕರನ್ನು ಬರಮಾಡಿಕೊಂಡರು. ನಂತರ ಅಂಬೇಡ್ಕರ್ ವೃತ್ತದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಬಡಾವಣೆಯ ವಿವಿಧ ಓಣಿಗಳಲ್ಲಿ ಸಂಚರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಶಿವರಾಜ್ ಪಾಟೀಲರು ರಾಂಪೂರಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದು, ೧೦ ಕೋಟಿ ಅನುದಾನದಲದಲಿ ಸದಾಶಿವ ನಗರದ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವೆ , ಕೊಟ್ಟ ಮಾತನ್ನು ಎಂದಿಗೂ ತಪ್ಪಿಲ್ಲ ಎಂದರು. ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಸದಾ ಇರಲಿ ಎಂದರು.
ಈ ವೇಳೆ ಮಾತಾನಾಡಿದ ಮಾಜಿ ಶಾಸಕರಾದ ಪಾಪಾರೆಡ್ಡಿಯವರು ಮತ್ತೊಮ್ಮೆ ತಾವೆಲ್ಲರೂ ಶಿವರಾಜ್ ಪಾಟೀಲರನ್ನು ಬಹುಮತದಿಂದ ಆರಿಸಿ ಕಳಿಸಬೇಕೆಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಕಾರ್ಯಕರ್ತರು ವಾರ್ಡಿನ ನಾಗರಿಕರು ಜನತೆ ಉಪಸ್ಥಿತರಿದ್ದರು.