ಕೊಟ್ಟ ಮಾತು ಉಳಿಸಿಕೊಳ್ಳುವೆ

ಚನ್ನಮ್ಮನ ಕಿತ್ತೂರು,ಜೂ23: ಕೊಟ್ಟ ಮಾತು ಉಳಿಸಿಕೊಳ್ಳುವುದು ನನ್ನ ಆದ್ಯ ಕರ್ತವ್ಯ. ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ. ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ಎಂ. ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಜಗನ್ಮಾತೆ ಶ್ರೀ ಗ್ರಾಮದೇವಿ ದೇವಸ್ಥಾನ ಕಟ್ಟಡ ಜೀರ್ಣೋದ್ಧಾರ ಸಮಿತಿ ವತಿಯಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದವರು.
ಗ್ರಾಮ ದೇವಿ ದೇವಸ್ಥಾನ ಕಟ್ಟಡ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವೆ ಹಾಗೂ ವೈಯಕ್ತಿಕವಾಗಿ ಅಳಿಲು ಸೇವೆ ಮಾಡುವೆ ಎಂದರು.
ಪಟ್ಟಣದಲ್ಲಿ ಇನ್ನು ಅನೇಕ ದೇವಸ್ಥಾನಗಳ ಇದ್ದು ಅವುಗಳ ಜೀರ್ಣೋದ್ಧಾರಕ್ಕೆ ಸರಕಾರದಿಂದ ಹಂತ-ಹಂತವಾಗಿ ಹಣ ಬಿಡುಗಡೆಗೊಳಿಸಲಾವುದು. ದೇವಸ್ಥಾನ ಕನಿಷ್ಠ ಹತ್ತು ಪೀಳಿಗೆಗಳು ನೋಡುವಂತೆ ಸುಂದರವಾಗಿ ಕಟ್ಟುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಸ್ವಲ್ಪ ವಿಳಂಬವಾದರು ಪರವಾಗಿಲ್ಲ ಸುಂದರವಾಗಿ ಗುಣಮಟ್ಟದ ದೇವಸ್ಥಾನದ ನಿರ್ಮಾಣ ಮಾಡೋಣ ಎಂದರು.
ಎನ್.ಸಿ. ಗಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವಿತಾ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು. ನಾವು ಇಲ್ಲದಿದ್ದರೂ ಮುಂದಿನ ಪೀಳಿಗೆ ಇಂತಹ ವ್ಯಕ್ತಿಗಳಿಂದ ಈ ಮಹತ್ತರ ಕಾರ್ಯವಾಗಿದೆ ಎಂದು ನೆನಪಿಸಿಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ ಮುರಗಯ್ಯ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಮಯದಲ್ಲಿ ಮಹಿಳೆಯರು ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಹೆಚ್ಚಿಗೆಯಾಗಬೇಕು ಎಂದು ಶಾಸಕರ ಗಮನಕ್ಕೆ ತಂದರು. ಅದಕ್ಕೆ ಸ್ಪಂದಿಸಿ ತಕ್ಷಣವೇ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಬರವಸೆ ನೀಡಿದರು.
ಈ ವೇಳೆ ಮಾಜಿ ಜಿಪಂ ಸದಸ್ಯ ಪಕ್ಕೀರಪ್ಪ ಸಕ್ರೆಣ್ಣವರ, ಮಾಜಿ ಪಪಂ ಅಧ್ಯಕ್ಷ ಸಿದ್ದಪ್ಪ ಗೋರಕೊಳ್ಳಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ಪಟ್ಟಣಶೆಟ್ಟಿ, ಗ್ರಾಮ ದೇವಿ ಸಮಿತಿ ಸದಸ್ಯರಾದ ಈರಣ್ಣಾ ಕರವಿನಕೊಪ್ಪ, ಚಿನ್ನಪ್ಪ ಗಡಾದ, ಕಲ್ಲಪ್ಪ ಗೋಣಿ,ರಾಜು ಗಾಣಗೇರ, ಶಶಿಧರ ಗದ್ದಿಹಳ್ಳಿ, ಮಡಿವಾಳಪ್ಪ ದಡ್ಡಿ, ಶಶಿಧರ ನಾಡಗೌಡ, ರಾಜು ನಾಡಗೌಡ, ದುಂಡಯ್ಯ ಸೋಲಬೈನವರಮಠ, ಆನಂದ ತಿಗಡಿ, ರಾಜು ಗಣಾಚಾರಿ, ಶಿವಪ್ಪ ಸಂಗೋಳ್ಳಿ, ಮಲ್ಲಿಕಾರ್ಜುನ ದಡ್ಡಿ, ಶಿವಾನಂದ ಕಿಲ್ಲೇದಾರ, ಶ್ರೀಶೈಲ ಪಾಗಾದ, ಸುರೇಶ ಮುತ್ನಾಳ, ಕಲ್ಲಪ್ಪ ಸಂಗೈನವರ,ರುದ್ರಪ್ಪ ಸಂಗೋಳ್ಳಿ, ಮಹಾಂತೇಶ ಗಣಾಚಾರಿ ಸೇರಿದಂತೆ ಅನೇಕರು ಇದ್ದರು.
ರಾಜು ಗಣಾಚಾರಿ ಸ್ವಾಗತಿಸಿದರು. ಅದೃಶ್ಯಾನಂದ ಗದ್ದಿಹಳ್ಳಿಶೆಟ್ಟಿ ನಿರೂಪಿಸಿ ವಂದಿಸಿದರು.