ಕೊಟ್ಟ ಮಾತಿನಂತೆ ನಡೆದಿದ್ದೇವೆ

ಕೊಟ್ಟ ಮಾತಿನಂತೆ ನಡೆದಿದ್ದೇವೆ
ನವಲಗುಂದ,ಡಿ.31: ಸುಮಾರು 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಬಿಜೆಪಿ ಪಕ್ಷದಿಂದ ರೈತರಿಗೆ ನೀಡಿದ ಉಡುಗೊರೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೇಳಿದರು.
ಅವರು ಕೇಂದ್ರ ಸರಕಾರ ಮಹಾದಾಯಿ ಯೋಜನೆಯ ಡಿ.ಪಿ.ಆರ್ ಅನುಮೋದನೆ ನೀಡಿದ ಹಿನ್ನೇಲೆ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡು ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಪಟ್ಟಣದ ರೈತ ಭವನದಲ್ಲಿ ಮಾತನಾಡಿದರು.
ಮಹಾದಾಯಿ ಕಳಸಾ,ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 250 ಕೀ,ಮಿ ಪಾದಯಾತ್ರೆ ನಡೆಸಿದ್ದರು, ನಂತರ ದೆಹಲಿಯಲ್ಲಿ ಹೋರಾಟ ಮಾಡುವ ಮೂಲಕ ಕೇಂದ್ರದ ಗಮನ ಸೆಳೆದಿದ್ದರು, ಈ ಸಂದರ್ಭದಲ್ಲಿ ಅಂದಿನ ಕೇಂದ್ರ ಮಂತ್ರಿ ದಿ, ಜಾರ್ಜ ಫರ್ನಾಂಡಿಸ್ ಅವರ ಪಾತ್ರ ಮಹತ್ವದ್ದಾಗಿತ್ತು, ನಂತರ ಯೋಜನೆ ಕುರಿತಾದ ಹೋರಾಟದಲ್ಲಿ ಕೊನೆಗೂ ರಾಜ್ಯಕ್ಕೆ ನ್ಯಾಯ ದೊರಕಿದೆ ಎಂದರು.
ಪಟ್ಟಣದ ಹೊರವಲಯದಲ್ಲಿರುವ ಶೆಟ್ಟರ ಕೆರೆಯಿಂದ ಸಚಿವರನ್ನು ತೆರೆದ ವಾಹನದಲ್ಲಿ ಬೃಹತ್ ಮೆರವಣೇಗೆ ಮೂಲಕ ಬಿಜೆಪಿ ಕಾರ್ಯಕರ್ತರು ರಮಾಢಿಕೊಂಡರು. ನಂತರ ರೈತ ಭವನ ಹತ್ತಿರದ ಹುತಾತ್ಮ ರೈತರ ಸ್ಮಾರಕಕ್ಕೆ ಸಚಿವ ಶಂಕರ ಪಾಟೀಲ್ ಮಾಲಾರ್ಪಣಿ ಮಾಡಿದರು.
ಅಂದಾನಯ್ಯ ಹಿರೇಮಠ, ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡರ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ್, ಸಿದ್ದಣ್ಣ ಕಿಟಗೇರಿ, ಜಯಪ್ರಕಾಶ ಬದಾಮಿ, ಮಹಾಂತೇಶ ಕಲಾಲ, ಸಿದ್ದಪ್ಪ ಜನ್ನರ, ವೀರಣ್ಣ ಚವಡಿ, ನಾಗಪ್ಪ ಹರ್ತಿ, ಬಸಣ್ಣ ಬೆಳವಣಕಿ, ನಾಗೇಶ್ ಬೆಂಟಿಗೇರಿ, ಬಸವರಾಜ ಕಾತರಕಿ, ರೈತ ಮುಖಂಡರಾದ ಸುಭಾಸಚಂದ್ರಗೌಡ ಪಾಟೀಲ್, ಸಿದ್ದಪ್ಪ ಮುಪ್ಪಯ್ಯನವರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.