ಕೊಟ್ಟ ಮಾತಿನಂತೆ ಎರಡನೆ ಬೆಳಿಗೆ ನೀರು-ನಾಡಗೌಡ

ಸಿಂಧನೂರು.ಏ.೨೧-ಜಿಲ್ಲೆ ಮತ್ತು ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಅಧಿಕಾರಿಗಳ ಸಭೆ ಕರೆದು ಅಗತ್ಯ ಮುನ್ನಚ್ಚರಿಕೆ ಕ್ರಮ ತಗೆದು ಕೊಳ್ಳಬೇಕೆಂದರೆ ಚುನಾವಣೆ ನೀತಿ ಸಂಹಿತೆ ಅಡ್ಡ ಬರುತ್ತಿದೆ ಎಂದು ಮಾಜಿ ಮಂತ್ರಿ ಶಾಸಕ ವೆಂಕರಾವ್ ನಾಡಗೌಡ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ದಿನೆ-ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದು ಅಗತ್ಯ ಮುನ್ನಚ್ಚರಿಕೆ ಕ್ರಮ ತಗೆದು ಕೊಳಬೇಕಾಗಿರುವದರಿಂದ ಸಭೆ ಕರೆಯಲು ಅನುಮತಿ ನೀಡುವಂತೆ ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆಯುತ್ತೆನೆ ಎಂದರು.
ಚುನಾವಣೆ ಆಯೋಗ ಸಭೆ ಕರೆಯಲು ಅನುಮತಿ ನೀಡಿದರೆ ತಾಲೂಕು ಮಟ್ಟದ ಸಭೆ ಕರೆದು ಜನ ಪ್ರತಿನಿಧಿಗಳು,ಸಂಘ ಸಂಸ್ಥೆಗಳ ಮುಖಂಡರಗಳು ಹಾಗೂ ಖಾಸಗಿ ವೈದ್ಯರ ಸಭೆ ಕರೆದು ಅವರ ಸಲಹೆ ಸೂಚನೆಗಳನ್ನು ಪಡೆದೈ ಕೊಂಡು ಕೊರೊನಾ ಹರಡದಂತೆ ಮುಂಜಾಗೃತೆ ಕ್ರಮ ತಗೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ ಜನ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಹಕಾರ ಇಲ್ಲದೆ ಅಧಿಕಾರಿಗಳ ಮಾತು ಜನ ಕೇಳುವುದಿಲ್ಲ ಎಂದರು.
ರೈತರಿಗೆ ಕೊಟ್ಟ ಮಾತಿನಂತೆ ಎರಡನೆ ಬೆಳಿಗೆ ಸಮರ್ಪಕ ನೀರು ಬಿಟ್ಟ ಕಾರಣ ಅಧಿಕ ಇಳುವರಿ ಬಂದು ರೈತರು ಸಂತೋಷದಲ್ಲಿ ಇದ್ದಾರೆ ಎರಡನೆ ಬೆಳಿಗೆ ನೀರು ಬಿಟ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನೀರಾವರಿ ನಿಗಮದ ಹಿರಿಯ ಕಿರಿಯ ಅಧಿಕಾರಿಗಳು ಮತ್ತು ಗ್ಯಾಂಗ ಮ್ಯಾನ್ ಗಳಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಈ ವರ್ಷ ದಾಖಲು ಪ್ರಮಾಣದಲ್ಲಿ ರೈತರು ಖರೀದಿ ಕೇಂದ್ರಗಕ್ಕೆ ಜೋಳ ಮಾರಿದ್ದಾರೆ ಕೂಡಲೆ ಭತ್ತ ಖರೀದಿ ಕೇಂದ್ರಗ ಆರಂಭಿಸುವಂತೆ ನಾಡಗೌಡ ಸರ್ಕಾರವನ್ನು ಒತ್ತಾಯಿಸಿದರು.
ಕೊರೊನಾ ಎರಡನೆ ಅಲೆ ಹೆಚ್ಚಾಗುತ್ತಿದು ಜನ ಇನ್ನು ವ್ಯಾಕ್ಸಿನ್ ಹಾಕಿಸಿಕೊಳಲ್ಲು ನಿರಾಕರಿಸುತ್ತಿದ್ದು ಎಲ್ಲಾರೂ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಂಡು ಮಾಸ್ಕ್ ಧರಿಸಿ ಸಮಾಜಿಕ ಅಂತರ ಕಾಪಾಡುವ ಮೂಲಕ ಕೊರೊನಾ ದಿಂದ ನಿಮ್ಮನ್ನು ಕಾಪಾಡಿಕೊಳ್ಳಬೇಕು ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡ ಅವರು ಹಿಂದಿನಂತೆ ಖಾಸಗಿ ವೈದ್ಯರ ಸಹಾಯ ಸಹಕಾರ ಪಡೆದು ಕೊಳ್ಳಬೇಕು ಎಂದು ಜಿಲ್ಲಾ ಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ಜೆಡಿಎಸ್ ಪಕ್ಷದ ಮುಖಂಡರಾದ ಬಸವರಾಜ್ ನಾಡಗೌಡ, ನಾಗೇಶ ಹಂಚನಾಳ ಕ್ಯಾಂಪ್, ವೆಂಕಟೇಶ್ ನಂಜಲದಿನ್ನಿ, ದಾಸರಿ ಸತ್ಯನಾರಾಯಣ, ಧರ್ಮನಗೌಡ, ಚಂದ್ರು ಮೈಲಾರ, ಪಂಪಾಪತಿ, ಎಸ್.ಪಿ ಟೇಲರ್, ನಿರುಪಾದಿ ನಾಗಲಾಪೂರು ಪತ್ರಿಕೆ ಗೋಷ್ಠಿಯಲ್ಲಿ ಉಪಸ್ತರಿದ್ದರು.