ಕೊಟ್ಟ ಮಾತಿಗೆ ಬದ್ಧ ಕಾಂಗ್ರೆಸ್ ಪಕ್ಷ: ನಾಸೀರ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.11: ಬಡ, ಹಿಂದುಳಿದ ಜನರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದೇ ಕಾಂಗ್ರೆಸ್ ಪಕ್ಷದ ಗುರಿ, ಆ ನಿಟ್ಟಿನಲ್ಲಿ ಈ ಶಕ್ತಿ ಯೋಜನೆಯಾಗಿದೆಂದು ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಹೇಳಿದರು.
ಅವರು ಇಂದು ನಗರದಲ್ಲಿ ಶಕ್ತಿ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆಂದರು.
ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಖನಿಜ ನಿಧಿಯಿಂದ 21 ಬಸ್ ಖರೀದಿ‌ಮಾಡಿದೆ. ಬಳ್ಳಾರಿ ವಿಭಾಗಕ್ಕೆ ಕೆಕೆ ಆರ್ಡಿಬಿ ಫಂಡ್ ನಲ್ಲಿ 60 ಬಸ್ ಖರೀದಿ ಮಾಡುತ್ತಿದೆ.
ಐದು ಸಾವಿರ ಕೋಟಿ ರೂ ವೆಚ್ಚದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದಂತೆ, ಅಪರೆಲ್ ಪಾರ್ಕ್ ಸ್ಥಾಪಿಸಲಿದೆ. ವಿಮ್ಸ್ ಸೂಪರ್ ಸ್ಪೆಷಲ್ ಆಸ್ಪತ್ರೆಯನ್ನು ಆರಂಭಿಸಲು ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಜೊತೆ  ಮಾತನಾಡಿದೆ.
ನಮ್ಮ ತಂದೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು ‌ ಅಂತಹ ಸಂಸ್ಥೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಖುಷಿಯ ವಿಚಾರ ಎಂದರು.