ಕೊಟ್ಟೂರೇಶ್ವರ ಸ್ವಾಮಿಯ ಹುಂಡಿಯಲ್ಲಿ 25 ಲಕ್ಷ 55 ಸಾವಿರ ರೂ ಸಂಗ್ರಹ

ಕೊಟ್ಟೂರು ಮಾ 31: ನಾಡಿನ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಕಾಣಿಕೆ ಹುಂಡಿಗಳಲ್ಲಿ 25,55,855 ಸಂಗ್ರಹವಾಗಿದೆ.
ದೇವಸ್ಥಾನದಲ್ಲಿ ಮಂಗಳವಾರ ಹುಂಡಿಪೇಟ್ಟಿಗೆ ಗಳನ್ನು ತೆರೆಯಲಾಗಿದ್ದು ರಥೋತ್ಸವ ನಂತರ
ಹುಂಡಿಗಳನ್ನು ತೆರೆಯಲಾಗಿದೆ.
ಈ ಸಂದರ್ಭದಲ್ಲಿ ಧಾರ್ಮಿಕ ಧತ್ತಿ ಇಲಾಖೆಯ ಎಸಿಎಂಹಚ್.ಪ್ರಕಾಶರಾವ್, ಕಾರ್ಯನಿರ್ವಾಹಕ ಅಧಿಕಾರಿ ಗಂಗಧರಪ್ಪ, ತಹಶೀಲ್ದಾರ ಜಿ.ಅನಿಲ್ ಕುಮಾರ್, ಸಿಹೆಚ್.ಎಂ. ನಾಗರಾಜ, ಬಂಧತರ ಚಂದ್ರ, ಕಾರ್ತಿಕ, ಪ್ರದೀಪ, ವೀರಣ್ಣ, ಪ್ರಶಾಂತ ಸೇರಿದಂತೆ ಇತರರು ಇದ್ದರು.