ಕೊಟ್ಟೂರೇಶ್ವರ ಸ್ವಾಮಿಯ ತೇರುಗಡ್ಡೆ ಹೊರಕ್ಕೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಫೆ.15:  ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಮಾರ್ಚ್ 4 ರಂದು ಜರುಗಲಿರುವ ಹಿನ್ನೆಲೆಯಲ್ಲಿ  ಬುಧವಾರ  ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಂಡು ಸ್ವಾಮಿಯ ತೇರುಗಡ್ಡೆಯನ್ನು ಶ್ರದ್ಧೆ ಭಕ್ತಿಯಿಂದ ಹೊರ ಹಾಕಲಾಯಿತು.
 ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ  ಮಧ್ಯಾಹ್ನ ಧಾರ್ಮಿಕ ವಿಧಿವಿಧಾನ ಕೈಂಕರ್ಯಗಳು ನಡೆದವು. ಹಿರೇಮಠದ  ಕೊಟ್ಟೂರು ದೇವರು ಆರ್ ಎಂ ಶಿವ ಪ್ರಕಾಶ್ ಕ್ರೀಯಾ ಮೂರ್ತಿಗಳು ಸಾನಿಧ್ಯ ವಹಿಸಿ ಪೂಜೆ ಸಲ್ಲಿಸಿದರು.
 ಸಕಲ ವಾದ್ಯ ಮೇಳ ದೊಂದಿಗೆ ಗಾಂಧಿ ಸರ್ಕಲ್ ನಲ್ಲಿರುವ ತೇರು ಮನೆಯಿಂದ ಬಯಲು ಬಸವೇಶ್ವರ ದೇವಸ್ಥಾನದ ಮುಂಭಾಗದವರೆಗೆ ತೇರು ಗಡ್ಡೆಯನ್ನು ಎಳೆದು ತರಲಾಯಿತು.
 ಅಸಂಖ್ಯಾತ ಭಕ್ತರು ಕೊಟ್ಟೂರು ದೊರೆಯೇ ನನಗಾರು ಸರಿಯೇ, ಸರಿ  ಸರಿ ಹಂದವರ  ಹಲ್ಲು ಮುರಿಯೇ  ಬಹುಪರಾಕ್ ಎಂಬ  ಜಯ ಘೋಷಣೆ ಮುಳುಗಿತ್ತು.
 ಅರಚಕರು , ಆಯಾಗಾರರು, ಕಟ್ಟಿಮನೆ ದೈವದವರು, ದೇವಾಲಯದ ಸಿಬ್ಬಂದಿ,ಭಕ್ತರು ಪಾಲ್ಗೊಂಡಿದ್ದರು .
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ  ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.