ಕೊಟ್ಟೂರೇಶ್ವರ ದೇವಾಲಯದಲ್ಲಿ ಇಂದಿನಿಂದ ನಿತ್ಯಅನ್ನದಾಸೋಹ

ಕೊಟ್ಟೂರು ಜ1 :ಆಯುಕ್ತರು ಹಿಂದೂಧಾರ್ಮಿಕ ಸಂಸ್ಥೆಗಳು ಧಾರ್ಮಿಕ ಇಲಾಖೆ ಬೆಂಗಳೂರು ಆದೇಶದಂತೆ ಪಟ್ಟಣದ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದೇವಾಲಯದ ವತಿಯಿಂದ ನಿತ್ಯಅನ್ನ ದಾಸೋಹವನ್ನು ನಿರಂತರವಾಗಿ ಪ್ರತಿದಿನ ಮದ್ಯಾಹ್ನಹಾಗೂ ರಾತ್ರಿಸಮಯದಲ್ಲಿ ಇಂದಿನಿಂದ ಪ್ರಾರಂಭಿಸಲಾಗಿದೆ ಎಂದು ದೇವಸ್ಥಾನದ ಪ್ರಾಧನ ಧರ್ಮಕರ್ತ ಸಿಹೆಚ್.ಎಂ.ಗಂಗಾಧರಯ್ಯಹೇಳಿದರು.
ಭಕ್ತಧಿಗಳು ತಮ್ಮ ತನುಮನ,ಧನಅರ್ಪಿಸುವುದರ ಮೂಲಕ ನಿತ್ಯ ಅನ್ನ ದಾಸೋಹಕ್ಕೆ ಸಮರ್ಪಿಸಿ ಅಧಿಕೃತ ರಸೀದಿ ಪಡೆಯಲು ಕೋರಲಾಗಿದೆ.ಶಾಶ್ವತ ಠೇವಣಿ 11000, ಅನ್ನದಾಸೋಹ
ಅಮವಾಸಿಗೆ 31 ಸಾವಿರ, ಅನ್ನದಾಸೋಹ ಪ್ರತಿ ಸೋಮವಾರ, ಗುರುವಾರ 9 ಸಾವಿರ ಹಾಗೂ ಒಂದು ದಿನದ ದಾಸೋಹ ಸೋಮವಾರ, ಗುರುವಾರ ಹೋರತುಪಡಿಸಿ 5 ಸಾವಿರ ರೂ ನಿಗದಿ ಮಾಡಲಾಗಿದೆ.

Spread the love