ಕೊಟ್ಟೂರೇಶ್ವರ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.03: ಪಟ್ಟಣದ ದಾನಿಗಳಾದ ಶ್ರೀಮತಿ ಹಳ್ಳಿ ಗೌರಿರಾಜ್( 95) ಅವರು ನಿನ್ನೆ ಅಮೆರಿಕದ ಡೆಲ್ಲಾಸ್ ನಗರದಲ್ಲಿ ವಿಧಿವಶರಾಗಿದ್ದು.
ಅವರು ಕೊಟ್ಟೂರಿನ  ಕೊಟ್ಟೂರೇಶ್ವರ ಮಹಾವಿದ್ಯಾಲಯದ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಡಾ.ಎಚ್.ಜಿ.ರಾಜ್ ಸಭಾಂಗಣ,ಭಾತಶಾಸ್ತ್ರ ಪ್ರಯೋಗಾಲಯ ಬ್ಲಾಕ್,ಶ್ರೀಮತಿ ಗೌರಿರಾಜ್ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಧನ ಸಹಾಯ ಮಾಡಿ ಮಹಾವಿದ್ಯಾಲಯಕ್ಕೆ ತಮ್ಮ ಮರೆಯಲಾಗದ ಮಹತ್ವದ ಕೊಡುಗೆ ನೀಡಿದ್ದಾರೆ.
ಅವರ ನಿಧನಕ್ಕೆ ವೀ.ವಿ.ಸಂಘದ ಅಧ್ಯಕ್ಷರಾದ ಶ್ರೀ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ ಶ್ರೀ ಅಲ್ಲಂ ಚನ್ನಪ್ಪ,  ಕಾರ್ಯದರ್ಶಿಗಳಾದ ಶ್ರೀ ಬಿ.ವಿ.ಬಸವರಾಜ್, ಸಹಕಾರ್ಯದರ್ಶಿ ಶ್ರೀದರೂರು ಶಾಂತನಗೌಡ,ಖಜಾಂಚಿ  ಶ್ರೀ ಗೋನಾಳ್ ರಾಜಶೇಖರಗೌಡ ರವರು ತೀವ್ರ ಕಂಬನಿ ಮಿಡಿದು ಸಂತಾಪ ಸಲ್ಲಿಸಿದ್ದಾರೆ.ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಅವರ ಈ ಸೇವೆಯನ್ನು ವೀರಶೈವ ವಿದ್ಯಾವರ್ಧಕ ಸಂಘ ಸದಾ ಸ್ಮರಿಸುತ್ತದೆ ಎಂದು
ಸಿದ್ದರಾಮ ಕಲ್ಮಠ, ಅಧ್ಯಕ್ಷರು, ಕೊಟ್ಟೂರೇಶ್ವರ ಮಹಾವಿದ್ಯಾಲಯ, ಕೊಟ್ಟೂರು.