ಕೊಟ್ಟೂರು 30 ಲಕ್ಷ ರೂ ದರೋಡೆ ಪ್ರಕರಣದ ಆರೋಪಿಗಳ ಬಂಧನ

ಕೊಟ್ಟೂರು ಏ 18. ಪಟ್ಟಣದ ಬಸವೇಶ್ವರ ಬಡಾವಣೆ ನಿವಾಸಿ ಉದ್ಯಮಿ ಮಲ್ಲೇಶಪ್ಪ ಹುಲುಮನಿಎಂಬುವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣ ಭೇದಿಸಿದ ಕೊಟ್ಟೂರು ಪೊಲೀಸರು 10ಆರೋಪಿಗಳನ್ನು ಬಂಧಿಸಿ ರೂ 12ಲಕ್ಷದ30ಸಾವಿರ ವಶಪಡಿಸಿಕೊಂಡಿದ್ದಾರೆ ಇವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎ.11ರಂದು ಮನೆಗೆ ನುಗ್ಗಿ ಮಾರಕಾಸ್ತ್ರ ಗಳಿಂದ ಬೆದರಿಸಿ30ಲಕ್ಷ ದೋಚಿ ಪರಾರಿಯಾಗಿದ್ದಾರು.ಬಳ್ಳಾರಿ ಎಸ್ಪಿ ಸೃದುಲ್ಲಾ ಅದಾಲತ್,ಡಿವೃಎಸ್ಪಿ ಹಾಲಮೂರ್ತಿರಾವ್ ಮಾರ್ಗ ದರ್ಶನದಲ್ಲಿ ಸಿಪಿಐ ದೊಡ್ಡಣ್ಣ ಪಿಎಸ್ಐ ನಾಗಪ್ಪ, ಸಿಬ್ಬಂದಿ ಗಳಾದ ಕಂದಗಲ್ ಕೊಟ್ರೆಗೌಡ,ಹೊಸಕೊಡಿಹಳ್ಳಿರಮೇಶ,
ಹ್ಯಾಳ್ಯ ರಾಜೇಂದ್ರ,ಆರ್.ಬಸವರಾಜ,ದೂಪಧಹಳ್ಳಿಮಂಜುನಾಥ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಸಂದರ್ಭದಲ್ಲಿ ಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಸೇರಿದಂತೆ ಅನೇಕ ರಿದ್ದರು