ಕೊಟ್ಟೂರು ಹಿರಿಯ ಪೊಲೀಸ್ ರಿಗೆ ಸನ್ಮಾನ

ಕೊಟ್ಟೂರು ಜ1:ಹೊಸವರ್ಷ ಆಚರಣೆ ಕೆಲವರು ಮೋಜು ಮಸ್ತಿ ಮಾಡಿ ಹಣವ್ಯಯಮಾಡಿ ಆಚರಣೆ ಮಾಡುತ್ತಿರುವುದು ನಾವುಗಳು ಕಾಣುವುದು ಸಹಜ ಆದರೆ ಕೊಟ್ಟೂರು ಪೊಲೀಸ್ ಠಾಣೆಯ ಸಿಬ್ಬಂದಿ ವಿಭಿನ್ನವಾಗಿ ಹೊಸವರ್ಷ ಆಚರಣೆಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಪಟ್ಟಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್, ಕೊಟ್ಟೂರು ಸಿಪಿಐ ದೊಡ್ಡಣ್ಣ, ಪಿ ಎಸ್ ಐ ನಾಗಪ್ಪ ಹಾಗೂ ಎ.ಎಸ್.ಐ,ಅಬ್ಬಾಸ್, ವಸಂತರಾವ್, ನಾಗರತ್ನಮ್ಮ, ಗಂಗಾಧರ ಇವರುಗಳನ್ನು ಸನ್ಮಾನ ಮಾಡುವ ಮೂಲಕ ಹೊಸವರ್ಷ ಸಂಭ್ರಮಾಚರಣೆ ಮಾಡಿ ಮಾದರಿಯಾದರು.
ಕಂದಗಲ್ಲ ಕೊಟ್ರಗೌಡ, ಕೋಡಿಹಳ್ಳಿ ರಮೇಶ, ದೂಪದಹಳ್ಳಿ ಮಂಜುನಾಥ, ಹ್ಯಾಳ್ಯಾ ರಾಜೇಂದ್ರ, ಲೋಲೇಶ್ವರ ಬಸವರಾಜ, ಯರಿಸ್ವಾಮಿ, ಆರಾಧ್ಯ ಸೇರಿದಂತೆ ಇತರ ಸಿಬ್ಬಂದಿಗಳಿದ್ದರು.