ಕೊಟ್ಟೂರು ಸೇರಿ 17 ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಚಿವರಿಂದ ಒಪ್ಪಿಗೆ

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.23: ಕೊಟ್ಟೂರು ಸೇರಿದಂತೆ 17 ಕೆರೆಗೆ ನೀರು ತುಂಬಿಸುವ ಯೋಜನೆ ಕುರಿತು ಅಧಿವೇಶನದಲ್ಲಿ ನಿನ್ನೆನಿಯಮ‌ 73 ರ ಅಡಿಯಲ್ಲಿ ಸದನದ ಶಾಸಕ ಎಸ್ ಭೀಮನಾಯ್ಕ
ಗಛಮನ ಸೆಳೆದಿದ್ದು, ಇದಕ್ಕೆ ಉತ್ತರಿಸಿದ ಮಾನ್ಯ ಜಲಸಂಪನ್ಮೂಲ ಸಚಿವರು‌ರವರು 2019-20 ರ ಬಜೆಟ್‌ನ ಭಾಷಣದಲ್ಲಿ ಯೋಜನೆ ಪ್ರಸ್ತಾವನೆಗೊಂಡಿದ್ದು, ಕ್ರಿಯಾ ಯೋಜನೆ ಅನುಮೋದನೆಗೊಂಡಿಲ್ಲ ಎಂದು ಸಚಿವರು ಸದನಕ್ಕೆ  ಉತ್ತರ ನೀಡಿದ್ದನ್ನು ಒಪ್ಪದ ನಾನು, ಸದರಿ ಯೋಜನೆಯ ಕ್ರಿಯಾ ಯೋಜನೆ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 11 ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ತಯಾರುಗೊಂಡಿದ್ದು, ಇದಕ್ಕಾಗಿ 2019-20 ರ ಬಜೆಟ್ ನಲ್ಲಿ ರೂ 85.00 ಕೋಟಿ ಅನುದಾನ ಸಹ ಘೋಷಿಸಿ, ನೀರಾವರಿ ನಿಗಮದಲ್ಲಿ ಅನುಮೋದನೆ ಸಹ ಪಡೆಯಲಾಗಿತ್ತು. ಆದರೆ ಸದರಿ ಯೋಜನೆಯು 11 ಕೆರೆಯ ಬದಲಾಗಿ 17 ಕೆರೆಗೆ ಪರಿಷ್ಕೃತಗೊಂಡು ಯೋಜನೆ ಮೊತ್ತ ರೂ 379.00 ಕೋಟಿಗೆ ಹೆಚ್ಚಳವಾದ ಕಾರಣ, ಈಗಿನ ಸರ್ಕಾರ ಯೋಜನೆ ತಡೆ ಹಿಡಿದು ಅನುದಾನ ಮಂಜೂರಾತಿಗೆ ವಿಳಂಬ ಮಾಡುತ್ತಿದ್ದು, ಇದರ ನಂತರದಲ್ಲಿ ಡಿಪಿಆರ್ ತಯಾರುಗೊಂಡ ಕೂಡ್ಲಿಗಿ ತಾಲೂಕಿನ 70 ಕೆರೆಗೆ ನೀರು ತುಂಬಿಸುವ ರೂ 670.00 ಕೋಟಿ ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಿದ್ದನ್ನು ಪ್ರಶ್ನಿಸಿ, ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾಗಿದ್ದೆನು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ರವರು ಮಧ್ಯ ಪ್ರವೇಶಿಸಿ, ಬಜೆಟ್‌ನ ಭಾಷಣದಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ, ಶಾಸಕ ಭೀಮನಾಯ್ಕ ಕೇಳುತ್ತಿರುವುದು ಸರಿ ಇದೆ, ಯೋಜನೆಗೆ ಕೂಡಲೇ ಒಪ್ಪಿಗೆ ನೀಡುವಂತೆ ಸಚಿವರನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಮಾನ್ಯ ಸಚಿವರು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು  ಅನುಷ್ಟಾನಗೊಳಿಸುವುದಾಗಿ ಸದನದಲ್ಲಿ ಘೋಷಿಸಿದರು.