ಕೊಟ್ಟೂರು ಸಿಲಿಂಡರ್ ಸ್ಫೋಟ; ಚಹಾ ಅಂಗಡಿ ಭಸ್ಮ

ಕೊಟ್ಟೂರು ನ 0 7:ಪಟ್ಟಣದ ಸಿಪಿಇಡಿಕಾಲೇಜ್ ಬಳಿಯಲ್ಲಿ ಹಾಲದಮರದ ಕೆಳಗೆ ಮಧ್ಯರಾತ್ರಿ ಸಿಲಿಂಡರ್‌ ಸ್ಫೋಟ ಗೊಂಡು ಚಹಾ ಅಂಗಡಿ (ಗೂಡಂಗಡಿ) ಸುಟ್ಟು ಕರಕಲಾಗಿದ್ದು
ಸಿಲಿಂಡರ್ ಪುಡಿಪುಡಿ ಯಾಗಿದೆ.
ಮರ ಬದವಾಣಿ ಎಂಬುವರಿಗೆ ಸೇರಿದ ಹೋಟೆಲ್‌ನಲ್ಲಿ ಸಿಲಿಂಡರ್‌ ಸ್ಫೋಟಗೊಂಡಿದೆ.
ವಿಷಯ ತಿಳಿದೊಡನೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಹೊತ್ತಿಗೆ ಇಡೀ ಗೂಡಂಗಡಿ ಹೊತ್ತಿ ಉರಿದಿದೆ. ಅಂಗಡಿಯಲ್ಲಿದ್ದ ಅಲ್ಪೋಪಾಹಾರದ ಸಾಮಗ್ರಿ, ಕುರ್ಚಿ, ಟೇಬಲ್‌ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟಿವೆ