ಕೊಟ್ಟೂರು ಬಸ್ ನಿಲ್ದಾಣ ನಿರ್ಮಾಣಕ್ಕೆ 3.50 ಕೋಟಿ ಹಣ ಬಿಡುಗಡೆ : ಶಾಸಕರು ಭರವಸೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.17: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ನವೀಕರಣಕ್ಕೆ ಕೇಂದ್ರ ಸರ್ಕಾರ 1.75 ಕೋಟಿ, ಕೆ.ಕೆ.ಆರ್.ಡಿ.ಬಿ 1.75 ಕೋಟಿ ಒಟ್ಟು 3.50 ಕೋಟಿ  ವೆಚ್ಚದ ಕಾಮಗಾರಿ ಶೀಘ್ರದಲ್ಲೇ ನೀತಿ ಸಮ್ಮಿತಿ ಮುಗಿದ ತಕ್ಷಣವೇ ಚಾಲನೆಗೊಳ್ಳಲಿದೆ ಎಂದು ಕ್ಷೇತ್ರದ ಶಾಸಕರು ಕೆ.ನೇಮಿರಾಜ್ ನಾಯ್ಕ್ ಭರವಸೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬುಧವಾರ ಸುರಿದ ಮಳೆಯಿಂದ ನಿಲ್ದಾಣ ಸಂಪೂರ್ಣ ಜಲಾವೃತ್ತವಾಗಿ ಸುಮಾರು 2 ಅಡಿಗೂ ಹೆಚ್ಚು ನೀರು ನಿಲ್ದಾಣವನ್ನು ಆವರಿಸಿತ್ತು, ಮಗುವಿಡಿದು ಮಹಿಳೆಯೊಬ್ಬರು ಬಸ್ ಇಳಿದು ಬರುವಾಗ ಕೈ ಜಾರಿ ಬಿದ್ದು, ನೀರು ಪಾಲಾಗಭೇಕಿದ್ದ ಮಗುವನ್ನು ತಾಯಿ ರಕ್ಷಿಸಿಕೊಂಡ ದೃಶ್ಯ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣದಲ್ಲಿ ಬಾರಿ ವೈರಲ್ ಆಗಿ ಇದರಿಂದ ಎಚ್ಚೆತ್ತ ಶಾಸಕರು ಗುರುವಾರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ನೂತನ ನಿಲ್ದಾಣ ನಿರ್ಮಾಣದ ಭರವಸೆ ನೀಡಿದರು.
ತಕ್ಷಣ ತಹಶಿಲ್ದಾರ ಅಮರೇಶ್ ಜಿ.ಕೆ ಅವರನ್ನು ಸ್ಥಳಕ್ಕೆ ಕರೆದು ನಿಲ್ದಾಣ ಅಳತೆ ಹಾಗೂ ಒತ್ತುವರಿ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ನಂತರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ತುಕಾರಾಂ ಯಮನಪ್ಪ ಮಾದರ ಅವರನ್ನು ಕರೆದು ನಿಲ್ದಾಣದ ರಾಜ್ ಕಾಲುವೆಯನ್ನು ಸ್ವಚ್ಚಗೊಳಿಸುವಂತೆ ತಾಕಿತ್ತು ಮಾಡಿದರು.
ಇದೇ ಸಂದರ್ಭದಲ್ಲಿ ಕೂಡ್ಲಿಗಿ ಲೋಕೋಪಯೋಗಿ ಇಲಾಖೆ ಎಇಇ ವೆಂಕಟರಮಣ ಅವರಿಗೆ ಲೋಕೋಪಯೋಗಿ ಇಲಾಖೆಯಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಜ್ ಕಾಲುವೆ ಅವೈಜ್ಞಾನಿಕವಾಗಿದ್ದು, ಈ ಅವ್ಯವಸ್ಥಿಗೆ ಬಹುತೇಕ ನಿಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಅವರನ್ನು ತರಾಟೆ ತೆಗಿದುಕೊಂಡರು.
ನೂತನವಾಗಿ ನಿರ್ಮಿಸಿರುವ ರಾಜ್ ಕಾಲುವೆಯನ್ನು ಗುತ್ತಿಗೆದಾರ
ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದಾರೆ ಇದನ್ನು ಸರಿ ಪಡಿಸದಿದ್ದರೆ ಈ ಬಗ್ಗೆ ತನಿಖೆ ನಡಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವೆ ಜೊತೆಗೆ ಅವರ ಮೇಲೆ ದೂರು ದಾಖಲಿಸುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರು ಸೇರಿದಂತೆ ಕೇಂದ್ರ ಸರ್ಕಾರದ ಹಲಾವಾರು ಯೋಜನೆಗಳನ್ನು ರೂಪಿಸುವುದಾಗಿ ಹೇಳಿದರು. ಮಿನಿ ವಿಧಾನಸೌದ, 100 ಬೆಡ್ ಆಸ್ಪತ್ರೆ ಕಾಮಗಾರಿ ಶೀಘ್ರದಲ್ಲೇ ಚಾಲನೆ ನೀಡುವೆವು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗಿರುವ ಕಾರಣ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು
ರೈತರಿಗೆ ಬೀಜ ,ರಸಗೊಬ್ಬರ,ಯಂತ್ರೋಪಕರಣಗಳು ಸರಿಯಾಗಿ ಪೂರೈಕೆ ಆಗಬೇಕು. ಅಂಗಡಿಯಲ್ಲಿ ಬೀಜ ಗೊಬ್ಬರ ದುಪ್ಪಟ್ಟು ಮಾರಾಟ ಮಾಡದಂತೆ ಕ್ರಮ ವಹಿಸಬೇಕು ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಕೆ ಎಸ್ ಅರ್ ಟಿ ಸಿ ಕಂಟ್ರೂಲರ್ ಜಹಾಂಗೀರ್ ಸಾಹೇಬ್, ಆರೋಗ್ಯ ನಿರಿಕ್ಷಕಿ ಟಿ  ಅನುಷಾ, ಸಹಾಯಕ ಇಂಜಿನಿಯರ್ ನಿಹಾರಿಕಾ ಸುಲೋಮಿ. ಇತರೆ ಇಲಾಖೆ ಅಧಿಕಾರಿಗಳು.
 ಪ‌ ಪಂ ಸದಸ್ಯರು ಬಾವಿಕಟ್ಟಿ ಶಿವಾನಂದ,
,ಮರಬದ ನಾಗರಾಜ, ಮುಖಂಡ ಕಾಮಶೆಟ್ಟಿ ಕೊಟ್ರೇಶ್ ,ಡಿಶ್ ಮಂಜುನಾಥ್,ಕೆ.ಕರಿಬಸಜ್ಜನ ಗೌಡ, ಉಮೇಶ್ ಗೌಡ ಮತ್ತಿತರರು ಇದ್ದರು.