ಕೊಟ್ಟೂರು ಪ.ಪಂ ಪ್ರಬಾರಿ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ನೇಮಕ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.19: ಪಟ್ಟಣ ಪಂಚಾಯಿತಿ ಪ್ರಭಾರಿ ಆಡಳಿತಾಧಿಕಾರಿಯಾಗಿ ಟಿ .ವಿ.ಪ್ರಕಾಶ್, ಸಹಾಯಕ ಆಯುಕ್ತರು ಹಾಗೂ ಉಪವಿಭಾಗಾಧಿಕಾರಿಗಳು, ಹರಪನಹಳ್ಳಿ ಇವರು ನೇಮಕಗೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಆದೇಶದಂತೆ
ಪಟ್ಟಣ ಪಂಚಾಯಿತಿಯ ಮೊದಲನೇ ಅವಧಿಯ ಅಧ್ಯಕ್ಷರು ಉಪಾಧ್ಯಕ್ಷರ  ಅವಧಿ ಮುಕ್ತಾಯವಾಗಿರುವುದರಿಂದ  ಎರಡನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆಗೊಳ್ಳುವವರೆಗೂ ಟಿ.ವಿ ಪ್ರಕಾಶ್   ಕೊಟ್ಟೂರು ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಗಳಾಗಿ  ಪ್ರಭಾರವಹಿಸಿ ಕೊಂಡಿದ್ದಾರೆ.