ಕೊಟ್ಟೂರು ಪ.ಪಂ.ಗೆ ಅಧ್ಯಕ್ಷರಾಗಿ ಸುಧಾಕರ ಗೌಡ ಭಾರತಿ ಪಾಟೇಲ್ ಗಿ ಆಯ್ಕೆ

ಕೊಟ್ಟೂರು ನ0 6 : ಇಲ್ಲಿನ ಪಟ್ಚಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಇಂದಿರಾ ಭರಮಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೋರವೇಲ್ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದರು ಸಂಖ್ಯೆಯ ಬಲವಿಲ್ಲದ ಕಾರಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಗೊಂಡರು. ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಧಾಕರ ಗೌಡ ಭಾರತಿ ಪಾಟೇಲ್, ಬಿಸಿಎ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯ ಶಫಿ ಅವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ, ಎಂಎಂ ಜೆ ಹರ್ಷವರ್ಧನ, ಪಿ.ಸುಧಾಕರ ಗೌಡ ಪಾಟೇಲ್, ಸೇರಿದಂತೆ ಆನೇಕರು ಇದ್ದರು.
ಚುನಾವಣಾ ಅಧಿಕಾರಿ ತಹಶೀಲ್ದಾರ ಜಿ.ಅನಿಲ್ ಕುಮಾರ್ ಕಾರ್ಯನಿರ್ವಾಹಿಸಿದ್ದರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿಎಸ್.ಗಿರೀಶ್, ಸೇರಿದಂತೆ ಇತರರು ಇದ್ದರು.