ಕೊಟ್ಟೂರು ಪ.ಪಂ ಕಾಂಗ್ರೆಸ್ ಗೆ ಒಲಿಯಲಿದೆ

ಕೊಟ್ಟೂರು ಅ 29 :ಸ್ಥಳಿಯ ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷಚುನಾವಣೆ ನ.6 ರಂದು ನಡೆಯಲಿದ್ದು ಕಾಂಗ್ರಸ್ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂದು ಮಾಜೀ ಶಾಸಕ ಹಾಗೂ ಕಾಂಗ್ರಸ್ ಪಕ್ಷದ ಚುನಾವಣಾ ವೀಕ್ಷಕ ನಂದಿಹಳ್ಳಿಹಾಲಪ್ಪ ಸಂಜೆವಾಣಿಗೆ ತಿಳಿಸಿದರು.
ಈಗಾಗಲೇ ಅಧ್ಯಕ್ಷ ಚುನಾವಣೆಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿದ್ದು ಕಾಂಗ್ರಸ್ ಪಕ್ಷಕ್ಕೆ ಅಧಿಕಾರ ನಿರಾಸದಾಯಕವಾಗಿ ಸಿಗಲಿದೆ ಈಗಾಗಲೇ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ ನೇತೃತ್ವದಲ್ಲಿ ಪೂರಕ ವಾತವರಣ ಸಿದ್ದಗೊಂಡಿದೆ ಎಂದರು.