ಕೊಟ್ಟೂರು ಪಪಂ ಅಧ್ಯಕ್ಷ ಚುನಾವಣೆ ನ.6 ಕ್ಕೆ.

ಕೊಟ್ಟೂರು ಅ 29 :ಸ್ಥಳಿಯ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನ.6 ರಂದು‌ ನಡೆಯಲಿದೆ.
ಆಕ್ಟೋಬರ್ ತಿಂಗಳ 22 ರಂದು‌ ನಡೆಯಬೇಕಿದ್ದ ಚುನಾವಣೆ ನ್ಯಾಯಾಲಯದ ತಡೆಯಾಜ್ಞೆಯಿಂದ ರದ್ದಾಗಿತ್ತು. ಈಗ ತಡೆಯಾಜ್ಞೆ ತೆರವಾಗಿರುವುದರಿಂದ ನ.6 ರಂದು ನಡೆಸಲಾಗುವುದು ಎಂದು
ತಹಸಿಲ್ದಾರ್ ಜಿ.ಅನಿಲ್ ಕುಮಾರ್ ಸಂಜೆವಾಣಿಗೆ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10 ರಿಂದ 12ಗಂಟೆ ವರಗೆ ನಾಮಪತ್ರ ಸ್ವೀಕರಿಸಲಿದೆ. ಅಗತ್ಯ ಬಿದ್ದರೆ ಮಧ್ಯಾಹ್ನ 1 ರಿಂದ ಮತದಾನ‌ ಪ್ರಕ್ರಿಯೆ ನಡೆಯಲಿದೆ ಎಂದರು.