ಕೊಟ್ಟೂರು ಪಟ್ಟಣ ಪಂಚಾಯಿತಿ ಸುಧಾಕರ ಗೌಡ ಭಾರತಿ ಪಾಟೇಲ್ ಅಧ್ಯಕ್ಷೆ

ಕೊಟ್ಟೂರು, ನ.6: ತೀವ್ರ ಕುತೂಹಲ ಕೆರಳಿಸಿದ ಪಟ್ಚಣಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಅಧ್ಯಕ್ಷಸ್ಥಾನಕ್ಕೆ ಇಂದಿರಾ ಭರಮಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೋರವೇಲ್ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದರು
ಸಂಸದ ದೇವೇಂದ್ರಪ್ಪ ಚುನಾವಣೆಯ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡಿದ್ದರು ಸಹಸಂಖ್ಯೆಯ ಬಲವಿಲ್ಲದಕಾರಣಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಉಪಾಧ್ಯಕ್ಷರುಆಯ್ಕೆಗೊಂಡರು.
ಸಾಮಾನ್ಯ ಮಹಿಳೆವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಧಾಕರಗೌಡ ಭಾರತಿಪಾಟೇಲ್, ಬಿಸಿಎ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾದ ಶಫಿ
ಅವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ, ಎಂ ಎಂ ಜೆ ಹರ್ಷವರ್ಧನ, ಪಿ.ಸುಧಾಕರ ಗೌಡ ಪಾಟೇಲ್, ಸೇರಿದಂತೆ ಆನೇಕರು ಇದ್ದರು.
ಚುನಾವಣಾಧಿಕಾರಿ ತಹಶೀಲ್ದಾರ ಜಿ.ಅನಿಲ್ ಕುಮಾರ್ ಕಾರ್ಯನಿರ್ವಾಹಿಸಿದ್ದರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿಎಸ್.ಗಿರೀಶ್, ಸೇರಿದಂತೆ ಇತರರು ಇದ್ದರು.