ಕೊಟ್ಟೂರು ಪಟ್ಟಣದ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಸೆ.22: ಜಿಲ್ಲಾಧಿಕಾರಿಗಳ ಆದೇಶದಂತೆ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಅಡಿಯಲ್ಲಿ ಅಂಗಡಿ, ಹೋಟೆಲ್ ಗಳಲ್ಲಿ ಬಾಲಕಾರ್ಮಿಕರು ಕೆಲಸ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಂಗಡಿ ಮತ್ತು ಹೋಟೆಲ್ ಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಮುಂಭಾಗದಲ್ಲಿ ಹಾಗೂ ನಾನಾ ಭಾಗಗಳಲ್ಲಿರುವ ಹೋಟೆಲ್ ಮತ್ತು ಅಂಗಡಿಗಳಿಗೆ ಕಾರ್ಮಿಕ ಇಲಾಖೆ, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯ ಇವರ ಸಹಯೋಗದಲ್ಲಿ ಅಧಿಕಾರಿಗಳು ಭೇಟಿಯನ್ನು ನೀಡಿದರು.
ಅಂಗಡಿಗಳಿಗೆ ಮತ್ತು ಹೋಟೆಲ್ ಗಳಿಗೆ ಭೇಟಿ ನೀಡಿ ಪರವಾನಿಗೆಯನ್ನು ಪರಿಶೀಲನೆ ಮಾಡಿದರು. ಪರವಾನಿಗೆ ಇಲ್ಲದವರು ಕೆಲವೇ ದಿನಗಳಲ್ಲಿ ಪರವಾನಿಗೆಯನ್ನು ತೆಗೆದುಕೊಳ್ಳಿ ಇಲ್ಲದಿದ್ದರೆ ಅಂತಹ ಅಂಗಡಿಗಳನ್ನು ಮುಚ್ಚಲಾಗುವುದು,
ಅಂಗಡಿಗಳಲ್ಲಿ ಧೂಮಪಾನ  ಮಾರಾಟ ಮಾಡುವವರು  ಅಂಗಡಿ ಮುಂಭಾಗದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಎಂದು ಪ್ರತಿಯೊಬ್ಬರು ಜಾಹೀರಾತು ರೂಪದಲ್ಲಿ ಬರೆಯಬೇಕು, ಇಲ್ಲದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,
ಅಂಗಡಿ, ಹೋಟೆಲ್ ಗಳಲ್ಲಿ  18 ವರ್ಷದ ಒಳಗಿನ ಬಾಲಕರು ಕೆಲಸ ಕಾರ್ಯಗಳು ನಿರ್ವಹಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಅಂಗಡಿಗಳ  ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ಕ್ಷೇತ್ರಾಧಿಕಾರಿಯಾದ ಈಶ್ವರಯ್ಯ ಎಚ್ಚರಿಕೆಯನ್ನು ನೀಡಿದರು.
  ಈ ಸಂದರ್ಭದಲ್ಲಿ ಶಿರಸ್ತಿದಾರರಾದ ಅಜ್ಮತ್ ವುಲ್ಲಾ, ಕೊಟ್ಟೂರು ತಾಲೂಕಿನ ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಅಶೋಕ್, ಕಾರ್ಮಿಕ ಇಲಾಖೆಯ ಸಹಾಯಕರಾದ ನಾಗರಾಜ್, ಶರಣಪ್ಪ, ಪುಷ್ಪಲತಾ, ಎ.ಎಸ್ಐ ಚಂದ್ರಶೇಖರ್, ಇಸಿಒ ಅಜ್ಜಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.

Attachments area