ಕೊಟ್ಟೂರು ತಾ.13 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ: ಮತ ಎಣಿಕೆ ಆರಂಭ

ಕೊಟ್ಟೂರು ಡಿ 29 :ತಾಲೂಕಿನ 13 ಗ್ರಾಮ ಪಂಚಾಯಿತಿಗಳಿಗೆ ನಡೆದ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಒಟ್ಟು 13 ಗ್ರಾಮ ಪಂಚಾಯಿಗಳ ಸದಸ್ಯ ಚುನಾವಣೆಗೆ ಡಿ.27 ರಂದು ಮತದಾನ ನಡೆದಿತ್ತು. ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗಿತ್ತು. ತಾಲೂಕಿನ 195 ಸ್ಥಾನಗಳಲ್ಲಿ 39 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ 156 ಸ್ಥಾನಗಳಿಗೆ ಚುನಾವಣಾ ಕಣದಲ್ಲಿ ಒಟ್ಟು 368 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಇಂದು ಸಂಜೆಹೊತ್ತಿಗೆ ಹಣೆಬರಹ ತಿಳಿಯಲಿದೆ.