ಕೊಟ್ಟೂರು ತಾ.ಗ್ರಾ ಪಂ ಚುನಾವಣೆ ಕಣದಲ್ಲಿ 368 ಜನ, 39 ಸ್ಥಾನಗಳಿಗೆ ಅವಿರೋಧ ಆಯ್ಕೆ

ಕೊಟ್ಟೂರು ಡಿ 20: ತಾಲೂಕಿನ ಈ ತಿಂಗಳ 27ರಂದು ಮತದಾನ ನಡೆಯುವ 13 ಗ್ರಾಮ ಪಂಚಾಯಿತಿಗಳ 195 ಸದಸ್ಯ ಸ್ಥಾನಗಳಲ್ಲಿ
39 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಅಂತಿಮವಾಗಿ 156 ಸ್ತಾನಗಳಿಗೆ 368 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆಯಲು ನಿನ್ನೆ ಕೊನೆಯ ದಿನವಾಗಿತ್ತು.
ಈ ಚುನಾವಣೆಗೆ 663 ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆ ನಡೆದು ಅವರಲ್ಲಿ 3ನಾಮಪತ್ರಗಳು ತಿರಸ್ಕೃತಗೊಂಡು 621 ನಾಮಪತ್ರಗಳು ಸೀಕೃತಗೊಂಡಿದ್ದವು. ಅವರಲ್ಲಿ ನಿನ್ನೆ 211 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.ಅವಿರೋಧ ಆಯ್ಕೆ
ವಿವರ:
ರಾಂಪುರ 7, ಉಜ್ಜಿನಿ6, ನಿಂಬಳಗೇರಿ3, ತೂಲಹಳ್ಳಿ 3, ಕಾಳಾಪುರ 2, ಕೆ.ಅಯ್ಯನಹಳ್ಳಿ 4, ದೂಪದಹಳ್ಳಿ 1, ಚಿರಿಬಿ 1, ನಾಗರಕಟ್ಟೆ 9.