ಕೊಟ್ಟೂರು ತಾ.ಗ್ರಾಮ ಪಂಚಾಯಿತಿ ಚುನಾವಣೆ ಶೇ.82.36ಮತದಾನ

ಕೊಟ್ಟೂರು ಡಿ 28: ತಾಲೂಕಿನ 13 ಗ್ರಾಮ ಪಂಚಾಯಿತಿಗಳ
81ಮತಗಟ್ಟೆಗಳಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ
82.36 ರಷ್ಟು ಮತದಾನವಾಗಿದೆ. ಚುನಾವಣಾ ಪ್ರಕ್ರಿಯೆಗಳು ಶಾಂತಿಯುತವಾಗಿ ನಡೆದವು. ಎರಡನೇ ಹಂತದಲ್ಲಿ 54263ಮತದಾರರು ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 44685
ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದರು.
ವಿವರ:
ಅಲಬೂರು ,ಕೋಗಳಿ, ರಾಂಪುರ, ಉಜ್ಜಿನಿ, ನಿಂಬಳಗೇರಿ, ತೂಲಹಳ್ಳಿ, ಕಾಳಾಪುರ, ಕೆ.ಅಯ್ಯನಹಳ್ಳಿ, ದೂಪದಹಳ್ಳಿ, ಕಂದಗಲ್ಲ, ಹ್ಯಾಳ್ಯ, ಚಿರಿಬಿ, ನಾಗರಕಟ್ಟೆ
ಅತಿಹೆಚ್ಚು ಮತದಾನ ವಾದ ಮತಗಟ್ಟೆ ಸಂಖ್ಯೆ 68 ಕುರುಬನಹಳ್ಳಿ ಶೇ.93.92