ಕೊಟ್ಟೂರು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಆ.05: ಕೊಟ್ಟೂರು ಪಟ್ಟಣದ ಸಿಪಿಎಡ್  ಕಾಲೇಜ್ ಆವರಣದಲ್ಲಿ ಕೊಟ್ಟೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಉದ್ಘಾಟನೆ ಮಾಡುವುದರ ಮೂಲಕ ಚಾಲನೆಯನ್ನು ನೀಡಲಾಯಿತು
ಈ ಕ್ರೀಡಾಕೂಟವನ್ನು ಶ್ರೀ ಸನ್ನಿಧಿ ಪಿಯು ಕಾಲೇಜ್ ಕೊಟ್ಟೂರು ಇವರ ಸಂಯುಕ್ತ ಆಶ್ರಯದಲ್ಲಿ 2022- 23ನೇ ಶೈಕ್ಷಣಿಕ ಸಾಲಿನ ಕೊಟ್ಟೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಕೊಟ್ಟೂರೇಶ್ವರ ದೇವಸ್ಥಾನದಿಂದ ಸಿ ಪಿಎಡ್  ಕಾಲೇಜಿನ ಮೈದಾನದವರೆಗೂ ಜ್ಯೋತಿಯನ್ನು ತರಲಾಯಿತು.
ಈ ಕ್ರೀಡಾಕೂಟದಲ್ಲಿ 10 ಕಾಲೇಜುಗಳು ಭಾಗವಹಿಸಿವೆ, ಈ ಕ್ರೀಡಾಕೂಟದಲ್ಲಿ 19 ಅಥ್ಲಾಟಿಕ್ಸ್, 10 ಗುಂಪು ಆಟಗಳನ್ನು ನಡೆಸಲಾಗುತ್ತದೆ ಎಂದು ಸನ್ನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಂತೋಷ್ ಕುಮಾರ್ ಅವರು ತಿಳಿಸಿದರು.
ಈ ಕಾರ್ಯಕ್ರಮ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ್ ಮಾತನಾಡಿ ಕ್ರೀಡಾಕೂಟದಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಧೈರ್ಯ, ಸಾಹಸಗಳ ಗುರುತಿಸುವಂತಹ ವೇದಿಕೆಯಾಗಿದೆ, ಈ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ತಿಳಿಸಿದರು. ಪ್ರಾಸ್ತಾವಿಕ ನುಡಿಯನ್ನು ಕರಿಬಸಮ್ಮ ನುಡಿದರು. ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧನೆಯನ್ನು ಸನ್ನಿಧಿ ಕಾಲೇಜಿನ ಪ್ರಾಚಾರ್ಯರಾದ ಸಂತೋಷ ರವರು ಬೋಧಿಸಿದರು.
ಈ ಸಂದರ್ಭದಲ್ಲಿ ಭಾಗೀರಥಿ ಪದವಿ ಪೂರ್ವ ಕಾಲೇಜಿನ  ಪ್ರಾಚಾರ್ಯರಾದ ನಿರ್ಮಲ ಶಿವನಗುತ್ತಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಭಾರತೀಯ ಸುಧಾಕರ್ ಪಾಟೀಲ್, ಎಂ ಎಂ ಜಿ ಹರ್ಷವರ್ಧನ್, ಕೊಟ್ಟೂರು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದ್ವಾರಕೀಶ್, ಶಿಕ್ಷಣ ಇಲಾಖೆಯ ಇಸಿಓ ಆನಂದ್, ಪ್ರದೀಪ್ ಭೂಸನೂರ್, ದೈಹಿಕ ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

Attachments area