ಕೊಟ್ಟೂರು ತಾಲೂಕು ಕೇಂದ್ರವಾಗಿದ್ದರು ಅಭಿವೃದ್ದಿಯಲ್ಲಿ ಹಿನ್ನಡೆ ನೂತನ ಪ.ಪಂ.ಅಧ್ಯಕ್ಷರಿಂದ ಹೊಸನಿರೀಕ್ಷೆ

ಕೊಟ್ಟೂರು ನ 12 :ತಾಲೂಕು ಕೇಂದ್ರವಾಗಿದ್ದರು ಕೊಟ್ಟೂರುಪಟ್ಟಣ ಅಭಿವೃದ್ದಿಯಲ್ಲಿ ಹಿನ್ನಡೆಯಿದೆ.ಪಟ್ಟಣದ ಕೊಲಾಶಂತೇಶ್ವರ ಶಾಲೆಯ ಮುಂಭಾಗ ನಿವೃತ್ತನೌಕರರ ಭವನ ಪ್ರದೇಶದಲ್ಲಿ ಇಂದಿಗೂ ಅಭಿವೃದ್ದಿಕಾಣದೇ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಭಾವನೆ ಆ ಪ್ರದೇಶದ ಜನರಲ್ಲಿ ಮೂಡುತ್ತಿದೆ.ಪಟ್ಟಣ ಪಂಚಾಯಿತಿ ಕಚೇರಿಗೆ ಇದರಬಗ್ಗೆ ಎಷ್ಟುಭಾರಿ ಮನವಿ ನೀಡಿದರು ಪ್ರಯೋಜನವಿಲ್ಲ ಎನ್ನುತ್ತಾರೆ ಅಲ್ಲಿಯಜನ,ಇತ್ತೀಚೆಗೆ ನೂತನವಾಗಿ ಪಟ್ಟಣಪಂಚಾಯಿತಿ ಅಧ್ಯಕ್ಷರಾಗಿ ಭಾರತಿ ಸುಧಕರಗೌಡ ಪಾಟೇಲ್ ಅಧಿಕಾರವಹಿಸಿಕೊಂಡಿದ್ದು ಇವರಿಂದ ಹೊಸಪರ್ವ ಆರಂಭವಾಗಬೇಕಾಗಿದೆ, ಸಾರ್ವಜನಿಕರು ಇವರಮೇಲೆ ಸಂಪೂರ್ಣವಾಗಿ ಭರವಸೆ ಇಟ್ಟುಕೊಂಡಿದ್ದು ಶಾಸಕ ಎಸ್.ಭೀಮಾನಾಯ್ಕ ಇವರಿಂದ ಅನುದಾನ ಪಡೆದು ಕೊಟ್ಟೂರು ಪಟ್ಟಣವನ್ನು ಮಾದರಿ ನಗರವಾಗಿ ಮಾಡುವ ನಿರೀಕ್ಷೆ ಜನತೆಯಲ್ಲಿ ಮೂಡಿದೆ.