ಕೊಟ್ಟೂರು ತಾಲೂಕು ಆಡಳಿತದಿಂದ ಕನ್ನಡ ಹಬ್ಬ ರಾಜ್ಯೋತ್ಸವ ಆಚರಣೆ

ಕೊಟ್ಟೂರು:ನ.1- ತಾಲೂಕು ಆಡಳಿತದಿಂದ ತಾಲೂಕು ಕಚೇರಿಯ ಆವರಣದಲ್ಲಿಂದುಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ತಹಶೀಲ್ದಾರ ಜಿ.ಅನಿಲ್ ಕುಮಾರ್ ಅವರು ಧ್ವಜಾರೋಹಣ ಮಾಡುವುದರ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ಗೌರವ ವಂದನೆ ಸ್ವೀಕರಿಸಿದ ತಹಶೀಲ್ದಾರ ಜಿ.ಅನಿಲ್ ಕುಮಾರ್ ಕನ್ನಡ ರಾಜ್ಯೋತ್ಸವದ ಸಂದೇಶವನ್ನು ನುಡಿದರು.ಉಪತಹಶೀಲ್ದಾರರಾದ ಅನ್ನದಾನೇಶ ಬಿ ಪತ್ತಾರ್, ಹೇಮಂತ್ ಕುಮಾರ್, ಶಿರಸ್ತೇದಾರರಾದ ಲೀಲಾ ಎಸ್, ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಡಿ ಶಿವಕುಮಾರ್, ಗ್ರಾಮ ಲೆಕ್ಕಿಗರಾದ ಸಿದ್ದಲಿಂಗೇಶ್, ರಮೇಶ, ಸಿದ್ದೇಶ, ಮಂಗಳ ವಾಲಿ, ಆಶಾ, ಬಸಮ್ಮ, ಹೆಚ್ ಶಾರದ, ಶರಣಬಸಪ್ಪ, ಕಛೇರಿ ಸಿಬ್ಬಂದಿಯಾದ ದೇವರಾಜ, ಮಂಜಮ್ಮ ಹಾಗೂ ಆರೋಗ್ಯ ಇಲಾಖೆಯ ಡಾ|| ಬದ್ಯಾನಾಯ್ಕ, ಹಾಗು ಸಿಬ್ಬಂದಿ ಹಾಜರಿದ್ದರು. ರವಿ ಹರಪನಹಳ್ಳಿ ಸ್ವಾಗತಿಸಿದರು. ಸಿ.ಮ.ಗುರುಬಸವರಾಜ ನಿರೂಪಿಸಿದರು.