ಕೊಟ್ಟೂರು ಕೋವಿಡ್‌ ಆರೈಕೆ ಕೇಂದ್ರ ಆರಂಭ

ಕೊಟ್ಟೂರು ಮೇ 2: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಕೋವಿಡ್‌ ಆರೈಕೆ ಕೇಂದ್ರ ತೆರೆಯಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಷಣ್ಮುಖ ನಾಯ್ಕ ತಿಳಿಸಿದರು.
ಈಗಾಗಲೇ 20 ಹಾಸಿಗೆಗಳ ವ್ಯವಸ್ಥೆ ಇರುವ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೂಡ್ಲಿಗಿ ಯಲ್ಲಿ ಇದ್ದು ಹೆಚ್ಚು ಸೋಂಕಿತರು ಬಂದಾಗ ತುರ್ತುಚಿಕಿತ್ಸೆ ನೀಡಲು ಕೊಟ್ಟೂರು ಪಟ್ಟಣದಲ್ಲಿ ಆರೈಕೆ ಕೇಂದ್ರ ತೆರೆಯಲಾಗಿದೆ ಎಂದರು.