ಕೊಟ್ಟೂರು: ಈವರ್ಷ ತರಳಬಾಳು ಹುಣ್ಣಿಮೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ನ 26 :  ಪಟ್ಟಣದಲ್ಲಿ ಈ ಹಿಂದೆ ನಡೆಯಬೇಕಿದ್ದ  ತರಳಬಾಳು ಜಗದ್ಗುರು ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದು ವರ್ಷ ಮುಂದೂಡಲಾಗಿತ್ತು ಈ ಬಾರಿ ಕೊರೋನ ಮಹಾಮಾರಿ ಕಡಿಮೆ ಯಾಗಿದ್ದು ಸರ್ಕಾರ ಪರವಾನಿಗೆ ನೀಡಿದರೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನಡೆಸಲಾಗುವುದು ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗುರುವಾರ ತಿಳಿಸಿದ್ದಾರೆ.
9 ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವ ಸರ್ಕಾರ ಒಪ್ಪಿಗೆ ಸೂಚಿಸಿದರೆ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದರು.