ಕೊಟ್ಟೂರುಸ್ವಾಮಿ ಮಠದಲ್ಲಿ ಸರ್ವಧರ್ಮ ಸಮನ್ವಯ ಮಡಿ ರಥೋತ್ಸವ ಕರೋನಾ ನೆರಳು ಸರಳ

ಹೊಸಪೇಟೆ ಏ3: ನಗರದ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಆವರಣದಲ್ಲಿ ಸರ್ವಧರ್ಮ ಸಮನ್ವಯ ಮಡಿ ರಥೋತ್ಸವ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ಜರುಗಿತು.
ಶ್ರೀ ಮಠದ ಆವರಣದಲ್ಲಿಯೇ ಶ್ರೀಮಠದ ಭಕ್ತವೃಂದದ ಮಧ್ಯ ನಡೆದ ಸರ್ವಧರ್ಮ ಸಮನ್ವಯ ರಥವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತು. ಸರ್ಮಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಶಾಂತಿ ಎಂಬ ಜಯಘೋಷಗಳ ನಡುವೆ ರಥೋತ್ಸವ ಸರಳವಾಗಿ ನಡೆಯಿತು.
ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು, ಮುಪ್ಪಿನ ಬಸವಲಿಂಗದೇವರು, ಕೊಟ್ಟೂರುದೇಶಿಕರು, ಪರ್ವತದೇವರು, ವಿಶ್ವನಾಥಸ್ವಾಮಿಗಳು, ವಿಜಯಪ್ರಭುದೇವರು, ಸಿದ್ದರಾಮಮಹಾಸ್ವಾಮಿಗಳು ನೇತೃತ್ವದಲ್ಲಿ ಜರುಗಿತು.
ಸಮಾಜದ ಮುಖಂಡರಾದ ಕೆ.ಎಸ್.ಲಿಂಗಪ್ಪ, ಸಾಲಿಸಿದ್ದಯ್ಯಸ್ವಾಮಿ, ಕೆ.ಕೊಟ್ರೇಶ್, ಪ್ರಭುಸ್ವಾಮಿ, ಬಿ.ಚಂದ್ರಶೇಖರ್, ಡಾ.ಮೃತ್ಯಂಜಯರುಮಾಲೆ, ಬಿ.ಚಿತ್ತಪ್ಪ, ನಾಗಭೂಷಣ, ಅನ್ನದಾನಸ್ವಾಮಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಇಂದು ಪ್ರವಚನ ಮಂಗಳ ಮಹೋತ್ಸವ
ಸಂಜೆ 7 ಗಂಟೆಗೆ ವಿಶ್ವಧರ್ಮ ದರ್ಶನ ಪ್ರವಚನ ಮಂಗಲಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಡಾ.ಸಂಗನಬಸವ ಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಉರವಕೊಂಡ ಸಂಸ್ಥಾನ ಉರಗಾದ್ರಿಮಠ ಡಾ.ಕರಿಬಸವ ಸ್ವಾಮಿ ನೇತೃತ್ವದಲ್ಲಿ, ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠ ಸಿದ್ದಲಿಂಗ ಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಚಿವ ಆನಂದ್‍ಸಿಂಗ್, ಬಿ.ಶ್ರೀರಾಮಲು, ಸಂಸದ ವೈ.ದೇವೆಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.