ಕೊಟ್ಟೂರುಠಾಣೆಗೆ ನಿಮ್ಮ ಮಿತ್ರ ಪೊಲೀಸ್ ತುರ್ತು ವಾಹನ

ಕೊಟ್ಟೂರು, ಮೇ.02: ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ವಿವಿಧ ಪೊಲೀಸ್ ಠಾಣೆಗೆ ನಿಮ್ಮ ಮೀತ್ರ ತುರ್ತು ವಾಹನಗಳನ್ನು ನೀಢಿದಂತೆ ಕೊಟ್ಟೂರು ತಾಲೂಕಿಗೆ ೨೪೭ ನಿಮ್ಮ ಮಿತ್ರ ತುರ್ತು ಪೊಲೀಸ್ ವಾಹನ ಮಂಜೂರಾಗಿದ್ದು ಇದು ತುರ್ತು ಪರಿಸ್ಥಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಿಪಿಐ ದೊಡ್ಡಣ್ಣ ಹೇಳಿದರು. ಪಟ್ಟಣದ ಠಾಣೆಗೆ ನೂತನ ನಿಮ್ಮ ಮಿತ್ರ ಪೊಲೀಸ್ ತುರ್ತು ವಾಹನ ಆಗಮಿಸಿದ್ದೂ ಅದರ ಕುರಿತು ಮಾತನಾಡಿದ ಅವರು ಅಪಘಾತ ಸಂಭವಿಸಿದರೆ, ಗ್ರಾಮಾಂತರ ಪ್ರದೇಶದಲ್ಲಿ ಜನರು ದೊಂಬಿ ಎದ್ದಿದರೆ. ಅಕ್ರಮ ಚಟುವಟಿಕೆ ಜರುಗುತ್ತಿದ್ದರೆ 112 ಗೆ ಕರೆ ಮಾಡಿದರೆ ಈ ನಮ್ಮ ಮಿತ್ರ ತುರ್ತು ಪೊಲೀಸ್ ವಾಹನ ತಕ್ಷಣ ಸ್ಥಳಕ್ಕೆ ದಾವಿಸಿ ರಕ್ಷಣೆ ನೀಡುವ, ಅಕ್ರಮ ಚಟುವಟಿಕೆ ತಡೆಯುವ ಕೆಲಸ ಮಾಡುತ್ತದೆ ಎಂದರು.
ಪಿಎಸ್ಐ ನಾಗಪ್ಪ, ಸಿಬ್ಬಂದಿ ಆರ್.ಬಸವರಾಜ,ಯರಿಸ್ವಾಮಿ, ಕಂದಗಲ್ ಕೊಟ್ರಗೌಡ, ಹೊಸ ಕೊಡಿಹಳ್ಳಿರಮೇಶ ಹ್ಯಾಳ್ಯರಾಜೇಂದ್ರ ಸೇರಿದಂತೆ ಅನೇಕ ರಿದ್ದರು