ಕೊಟ್ಟೂರುಕೆರೆ ಉಳಿಸಿ ಉಚ್ಛ ನ್ಯಾಯಾಲಯದ ಆದೇಶ ಅಂಚೆಕೊಟ್ರೇಶ

ಕೊಟ್ಟೂರು ನ 22 :ಕೆರೆಯಿಂದ 30 ಮೀಟರ್ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ತೆರವು ಹಾಗೂ ಕೆರೆಗೆ ಚೌಕಟ್ಟನ್ನು ನಿಗದಿಪಡಿಸಿ ತಂತಿ ಬೇಲಿ ಹಾಕಿಸುವುದನ್ನು ರಾಜ್ಯದ ಎಲ್ಲಾ ಕೆರೆಗಳಿಗೂ ಅತಿ ಶೀಘ್ರದಲ್ಲಿ ಮಾಡಬೇಕು ಎನ್ನುವ ಆಜ್ಞೆಯನ್ನು ಹೊರಡಿಸಿರುವುದು ತುಂಬಾ ಸಂತೋಷದ ಸಂಗತಿ ಎಂದು ನಮ್ಮ ಕೆರೆ ನಮ್ಮ ಹಕ್ಕು ವಿನ ಸಂಚಾಲಕ ಅಂಚೆ ಕೊಟ್ರೇಶ್ ಪತ್ರಿಕೆಗೆ ತಿಳಿಸಿದರು , ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂದಿಸಿದಂತೆ 2008 ರಲ್ಲಿ  ನೀಡಿದ ಆದೇಶ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ , 2012 ಎಪ್ರಿಲ್ 11 ರಂದು ಸ್ಪಷ್ಟವಾಗಿ ನೀಡಿದ್ದ ಆದೇಶಗಳನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸದಿದ್ದರೆ ಆಯಾ ಭಾಗದ ಸಂಭಂದಿಸಿದ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಲಯ ನಿಂದನೆ ದಾವೆ ಹೂಡಬೇಕಾಗುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ಎಚ್ಚರಿಸಿದೆ , ಈ ಚಾಟಿ ಏಟಿಗೆ ಎಚ್ಚೆತ್ತ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ . ಮಹೇಶ್ವರ ರಾವ್ ರಾಜ್ಯದ  ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಇದೇ ತಿಂಗಳ 23   ಒಳಗೆ  ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಉತ್ತರಿಸಬೇಕಾಗಿರುವುದರಿಂದ ನಿಗದಿತ ನಮೂನೆಯಲ್ಲಿ ಪ್ರಗತಿಯ ವರದಿ ಸಲ್ಲಿಸಲು ತಿಳಿಸಿದ್ದಾರೆ , ಕೆರೆಗಳಿಗೆ ಹರಿದುಬರುವ ನೀರಿನ ಹಳ್ಳಗಳನ್ನು ಸಮರ್ಪಕವಾಗಿ ಕಾಪಾಡುವುದು , ಕೆರೆ ನೀರಿಗೆ ಕಲುಷಿತ ನೀರು ಸೇರಿದಂತೆ ನೋಡಿಕೊಳ್ಳವುದು , ಕಾಲ ಕಾಲಕ್ಕೆ ಹೂಳೆತ್ತಿಸುವುದು  , ಕೆರೆಯ ಬಫರ್ ಜೋನ್ ನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಸಿ ನೆಡುವುದು , ಕರ್ನಾಟಕ ರಾಜ್ಯ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು , ಕೆರೆಗಳ ದೂರು ಸ್ವೀಕರಿಸುವುದು ,ಪ್ರತಿ ನಾಲ್ಕು ತಿಂಗಳಿಗೆ ಈ ಸಮಿತಿಯ ಸಭೆ ನಡೆಸುವುದು , ಈ ಎಲ್ಲಾ ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯ ಹೊರಡಿಸಿರುವುದು ಕೆರೆಗಳನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದೆ ಎಂದು ಅಂಚೆ ಕೊಟ್ರೇಶ್  ಅಭಿಪ್ರಾಯ ಪಟ್ಟರು ,
ಕೊಟ್ಟೂರಿನ ಕೆರೆಗೆ ಶಾಶ್ವತವಾಗಿ  ನೀರು ಬರುವಂತಾಗಲಿ ಎಂದು 2017 ರಲ್ಲಿ ” ನಮ್ಮ ಕೆರೆ ನಮ್ಮ ಹಕ್ಕು  ಎನ್ನುವ ಆತ್ಮೀಯರ ಬಳಗದೊಂದಿಗೆ ಇಡೀ 852 ಎಕ್ಕರೆಯ ಬಳ್ಳಾರಿ ಜಿಲ್ಲೆಯ ಮೂರನೆಯ ಅತಿ ದೊಡ್ಡ ಕೆರೆಯನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಾಯದಿಂದ ಜಾಲಿ ಮುಕ್ತ ಮಾಡಿ ನೀರು ಬರುವಂತೆ ಮಾಡಿದ್ದು ಹಾಗೂ ಈ ಕೆಲಸ ದೇಶಕ್ಕೆ ಮಾದರಿಯಾಗಿದ್ದು ಈಗ ಇತಿಹಾಸ , ಇಷ್ಟಕ್ಕೆ ಸುಮ್ಮನೆ ಬಿಡದೇ ಪ್ರತಿ ಹಂತದಲ್ಲಿ ಕೆರೆಯ ಉಳಿವಿಗಾಗಿ ಹೋರಾಟ ಮಾಡುತ್ತಲೇ ಬಂದು ಕೆರೆಯಲ್ಲಿ  ನಡೆಯುವ ಅಕ್ರಮಗಳ ಬಗ್ಗೆ ಸಂಬಂದಿಸಿದ ಸ್ಥಳೀಯ ಅಧಿಕಾರಿಗಳ ಗಮನ ಹರಿಸುವುದು , ಆಗಾಗ ಪತ್ರ ಮುಖೇನ ಜಾಗೃತಿ ಮೂಡಿಸುವುದು ಇವರ ಅದಮ್ಯ ಕರ್ತವ್ಯ ವಾಗಿದೆ ಈ ನಿಟ್ಟಿನಲ್ಲಿ ಈಗ ಮಾನ್ಯ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಕೊಟ್ಟೂರಿನ ಕೆರೆಗೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಮೇಲಿನ ಎಲ್ಲಾ ಕಾರ್ಯಗಳು ಆದಷ್ಟು ಬೇಗ ಜರುಗಲಿ  ನಮ್ಮೂರ ಕೆರೆ ಯಾವಾಗಲೂ ನೀರಿನಿಂದ ಕಂಗೊಳಿಸಲಿ , ದುಷ್ಟ ಜನರಿಂದ ಕೆರೆಯನ್ನು ಕಾಪಾಡುವುದು  ಕೆರೆ ಸುತ್ತಲೂ ಚೌಕಟ್ಟನ್ನು ನಿಗದಿಪಡಿಸಿ ತಂತಿ ಬೇಲಿ ಹಾಕಿಸಿ ಎಂದು ನಮ್ಮ ಕೆರೆ ನಮ್ಮ ಹಕ್ಕು ವಿನ ಸಂಚಾಲಕ ಅಂಚೆ ಕೊಟ್ರೇಶ್ ಒತ್ತಾಯಿಸಿದ್ದಾರೆ ,