ಕೊಟ್ಟೂರು:ಕಸ್ಟರ್ ಮಟ್ಟದ ಪ್ರತಿಭಾ ಕಾರಂಜಿ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಸೆ.12: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದಾಗಿ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳಲಾಯಿತು.
    ಪಟ್ಟಣದ ಶ್ರೀ ಮಹದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ  ಕೊಟ್ಟೂರು ವತಿಯಿಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
     ದೀಪದ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆಯನ್ನು ನೀಡಲಾಯಿತು.
   ಈ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಒಟ್ಟು 10 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದವು, ಈ  ಕಾರಂಜಿಯಲ್ಲಿ ವಿದ್ಯಾರ್ಥಿಗಳಿಂದ ಛದ್ಮವೇಷ, ಭರತನಾಟ್ಯ, ರಂಗೋಲಿ, ಕ್ವಿಜ್, ಭಾವಗೀತೆ, ಜಾನಪದ ನೃತ್ಯ, ಹಾಸ್ಯ, ಮಿಮಿಕ್ರಿ, ಸಂಸ್ಕೃತ ಮತ್ತು ಅರೇಬಿಕ್ ಭಾಷೆಯಲ್ಲಿ ಧಾರ್ಮಿಕ ಪಠಣ, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಭಾಷಣ ಹಾಗೂ ಇನ್ನು ಮುಂತಾದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ ಎಂದು ಮುಖ್ಯೋಪಾಧ್ಯಯರಾದ ಪಂಪಾಪತಿಯವರು ತಿಳಿಸಿದರು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಅಜ್ಜಯ್ಯ ನುಡಿದರು. ಸ್ವಾಗತ ಬಸಣೇಪ್ಪ ನಿರೂಪಣೆ ಸುನಿತಾ, ವಂದನಾರ್ಪಣೆ ಬಸವರಾಜ ರವರು ನೆರವೇರಿಸಿದರು.
    ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ವಿದ್ಯಾಶ್ರೀ, ಗುರು ಕೊಟ್ಟೂರೇಶ್ವರ ವಿದ್ಯಾ ಪ್ರಸಾರ ಪರಿಷತ್ತು ಸಂಘದ ಕಾರ್ಯದರ್ಶಿಯಾದ ಸರೋಜ ಪಂಪಾಪತಿ, ಕೊಟ್ಟೂರು ಬಾಲಕರ ಪ್ರೌಢಶಾಲೆಯ  ಮುಖ್ಯ ಗುರುಗಳಾದ ಬಸವರಾಜ್, ಎಸ್. ಕೊಟ್ರೇಶ್, ಇಸಿಒ ಆನಂದ ದೇವರು ಕೊಳ್ಳದ, ನಿಂಗಪ್ಪ,  ಸಿ.ಅಜ್ಜಪ್ಪ, ಹಾಗೂ  ಸಿಆರ್ ಪಿ ಗಳು, ಶಿಕ್ಷಕರು ಇತರರು ಉಪಸ್ಥಿತರಿದ್ದರು.

Attachments area