ಕೊಟ್ಟೂರಿನ ಮತಭದ್ರತಾ ಕೇಂದ್ರಕ್ಕೆ ಎಸಿ ಭೇಟಿ

ಕೊಟ್ಟೂರು, ಡಿ.23: ತಾಲೂಕಿನ 13ಗ್ರಾಮಪಂಚಾಯಿತಿಗಳ ಚುನಾವಣೆ ಡಿ27ರಂದು ನಡೆದು 30ರಂದು ಮತಎಣೆಕೆ ಇರುವುದರಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೆ ಹರಪಮಹಳ್ಳಿಸಹಾಯಕ ಆಯುಕ್ತಪ್ರಸನ್ನಕುಮಾರ ಭೇಟಿ ನೀಡಿ ಮತ ಎಣಿಕೆ ಕಾರ್ಯದ ಕೊಠಡಿಗಳಲ್ಲಿನ ಸಿದ್ದತೆ, ಭದ್ರತಾ ಕೊಠಡಿಯನ್ನು
ಪರಿಶೀಲನೆ ನಡೆಸಿ ಯಾವುದೇ ಲೋಪವಾಗದಂತೆ ಕಾರ್ಯವನ್ನು ನಿರ್ವಹಿಸುವಂತೆ ಸಿಬ್ಬಂದಿಗೆ
ಸೂಚಿಸಿದರು. ಈ ಸಮಯದಲ್ಲಿ ತಹಶೀಲ್ದಾರರಾದ ವಿ.ಎಂ.ಗೋಠೇಕರ, ಉಪತಹಶೀಲ್ದಾರ್ ಅನ್ನದಾನೇಶ, ಚುನಾವಣೆ ವಿಭಾಗದ ಅಧಿಕಾರಿ, ಕೋಗಳಿ ಆರ್.ಐ. ಡಿ ಶಿವಕುಮಾರ, ಕೊಟ್ಟೂರು ಆರ್.ಐ
ಹಾಲಸ್ವಾಮಿ, ಟೈಪಿಸ್ಟ್ ಗುರುಬಸನರಾಜ ಇದ್ದರು.