
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.04: ಪಟ್ಟಣದಲ್ಲಿ ಶಾಶ್ವತವಾಗಿ ನಾಟಕ ಮಂದಿರ ನಿರ್ಮಾಣವಾಗುವಂತೆ ನಾವೆಲ್ಲರೂ ರಾಜಕೀಯ ವ್ಯಕ್ತಿಗಳಿಗೆ ಒತ್ತಾಯ ಮಾಡಬೇಕು ಎಂದು ಸಾಹಿತಿಗಳಾದ ಕುಂಬಾರ್ ವೀರಭದ್ರಪ್ಪ ತಿಳಿಸಿದರು
ಪಟ್ಟಣದಲ್ಲಿ ಶ್ರೀ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಜೇವರ್ಗಿ ಇವರು ಕೊಟ್ಟೂರೇಶ್ವರ ರಥೋತ್ಸವದ ಪ್ರಯುಕ್ತ ನಾಟಕದ ವೃತ್ತಿಯಲ್ಲಿ ಕಲಾವಿದರಾಗಿ ಮತ್ತು ನಾಟಕದಲ್ಲಿ ಅನೇಕ ಪಾತ್ರದಲ್ಲಿ ಅಭಿನಯಿಸಿದ ಕಲಾವಿದರಿಗೆ ಕರ್ನಾಟಕ ರಾಜ್ಯ ರೈತರು ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ) ಬಣದ ವತಿಯಿಂದ ಸನ್ಮಾನದ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಕೊಟ್ಟೂರಿನಲ್ಲಿ ರಥೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು ಎರಡು ತಿಂಗಳಿಂದ ನಾಟಕಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಈ ನಾಟಕ ಕಲಾವಿದರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು. ಈಗಿನ ತಂತ್ರಜ್ಞಾನದಲ್ಲಿ ನಮ್ಮ ಹಾಸ್ಯಕ್ಕೆ ನಾಟಕವು ಮುಖ್ಯವಾಗಿದೆ, ಈ ನಾಟಕಗಳನ್ನು ಮತ್ತು ಕಲಾವಿದರನ್ನು ನಾವು ಬೆಳೆಸುವ ಕಾರ್ಯ ಮಾಡಬೇಕು.ರಾಜಣ್ಣ ಜೇವರ್ಗಿ ಅವರು ಟಿವಿ ಮತ್ತು ಮೊಬೈಲ್ ದಾಂದೇಯ ನಡುವೆಯೂ ತಮ್ಮ ನಾಟಕ ಸಂಘವನ್ನು ಬೆಳೆಸುವುದರಲ್ಲಿ ಅತಿ ಶ್ರಮ ವಹಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ವೃತ್ತಿ ಕಲಾವಿದರಾದ ನಾಟಕದ ಮಾಲೀಕರಾದ ರಾಜಣ್ಣ ಜೇವರ್ಗಿ, ನೀಲಾ ಜೇವರ್ಗಿ, ಅನ್ನಪೂರ್ಣ, ರೇಣುಕ ಮುಧೋಳ್, ಮಾರುತಿ ಶೆಟ್ಟಿ, ಹನುಮಂತಪ್ಪ, ವೀರೇಶ್, ಬಸವಲಿಂಗಪ್ಪ, ಅಂಬರ್ ಲೋಕಪೂರ್, ಹಾಗೂ ಕುಂಬಾರ್ ವೀರಭದ್ರಪ್ಪ, ಉಜ್ಜಿನಿ ರುದ್ರಪ್ಪ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘದ(ವಾಸುದೇವ ಮೇಟಿ ಬಣ) ಜಿಲ್ಲಾ ಅಧ್ಯಕ್ಷ ಎಂ ಪ್ರಕಾಶ್, ಉಪಾಧ್ಯಕ್ಷ ಜಂಬೂರು ಮರಳಸಿದ್ದಪ್ಪ, ಗೌರವಾಧ್ಯಕ್ಷ ಚಪ್ಪರದಹಳ್ಳಿ ಕೊಟ್ರಪ್ಪ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ, ಎಂ ಮಂಜುನಾಥ್, ತಿಮ್ಲಾಪುರ ಮತ್ತು ತಿಮಲಾಪುರ ತಾಂಡದ ಎಲ್ಲಾ ಪದಾಧಿಕಾರಿಗಳು, ಅಯ್ಯನಹಳ್ಳಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು