ಕೊಟ್ಟೂರಿನಲ್ಲಿ ದೇವರ ದಾಸಿಮಯ್ಯ ಜಯಂತಿ

ಕೊಟ್ಟೂರು, ಏ.17: ಕಾಯಕ ನಿಷ್ಠೆಯಲ್ಲಿ ತೊಡಗಿಸಿಕೊಂಡು ಸಮಾನತೆಯಿಂದ ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ಶರಣರ ವಚನಗಳನ್ನು ಅಧ್ಯಯನ ಮಾಡುವುದರಿಂದ ಜೀವನ್ಮುಕ್ತಿ ದೊರೆಯಲಿದೆ ಎಂದು ತಹಶೀಲ್ದಾರ್ ಜಿ.ಅನಿಲ್ ಕುಮಾರ್‌ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತದಿಂದದೇವರ ದಾಸಿಮಯ್ಯ ಅವರ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಶರಣಕುಲಕ್ಕೆ ತಿಲಕ ಪ್ರಾಯರಾಗಿದ್ದ ದೇವರ ದಾಸಿಮಯ್ಯ ಅವರು ಮಾನವರಿಗೆ ಮಾನವ ಮುಚ್ಚುವ ಬಟ್ಟೆ ನೇಯ್ದು, ಭಗವಂತನ ನಿಜವಾದ ಕಾಯಕಯೋಗಿ ಎನಿಸಿದ್ದರು. ಶರಣದ ವಚನಗಳನ್ನು ಸರ್ವರೂ ಓದಿಕೊಂಡರೆ ನೈತಿಕತೆ ಬೆಳೆಯಲಿದೆ ಎಂದರುಆರ್ ಐ ಹಾಲಸ್ವಾಮಿ, ಹರಪನಹಳ್ಳಿ ರವಿ,ಗುರುಬಸವ ರಾಜ್ ಸೇರಿದಂತೆ ಅನೇಕ ರಿದ್ದರು