ಕೊಟ್ಟೂರಲ್ಲಿ ನಮೋಶಿಗೆ ಸನ್ಮಾನ

ಕೊಟ್ಟೂರು ನ 20 : ವಿಧಾನಪರಿಷತ್ತಿಗೆ ಆಯ್ಕೆಯಾಗಿರುವ ಶಶೀಲ್ ಜಿ. ನಮೋಶಿ ಅವರನ್ನು ಪಟ್ಟಣದ ಬಿಜೆಪಿ ಘಟಕದಿಂದ ಪಟ್ಟಣದ ಪ್ರವಾಸಿಮಂದಿರದಲ್ಲಿ ಸನ್ಮಾನಮಾಡಲಾಯಿತು.ಬಿಜೆಪಿಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡಮಾತನಾಡಿ
ಶಿಕ್ಷಕರ ಹಾಗೂ ಉಪನ್ಯಾಸಕರ ದನಿಯಾಗಿ ನಿಲ್ಲಲಿದ್ದು, ಈಶಾನ್ಯ ಭಾಗದ ಶಿಕ್ಷಣ ಕ್ಷೇತ್ರದ ಏಳಿಗೆಗೆ ಕಾರಣಲಾಗಲಿದ್ದಾರೆ ಎಂದುಹೇಳಿದರು.ಸನ್ಮಾನ ಸ್ವೀಕರಿಸಿಮಾತನಾಡಿದ ನಮೋಶಿ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಸೌಲಭ್ಯಗಳನ್ನು ತರುವಲ್ಲಿ ಶ್ರಮಿಸುವೆ ಎಂದರು. ತಾಲೂಕು ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷಬಿ.ವೆಂಕಟೇಶನಾಯ್ಕ,ಎಸ್.ರಾಕೇಶ್, ಅರವಿಂದ ಬಸಾಪುರ, ವಿರೇಶಗೌಡ ಸೇರಿದಂತೆ ಇತರರು ಇದ್ದರು.