ಕೊಟ್ಟೂರಲ್ಲಿ ಗ್ಯಾಸ್‌ ಸೋರಿಕೆ ಯಿಂದ ಸಿಲೆಂಡರ್ ಸ್ಫೋಟ

ಕೊಟ್ಟೂರು ಅ 29 :ಪಟ್ಟಣದ ಮುದುಕನ ಕಟ್ಟೆಯ ಮನೆಯೊಂದರ ಅಡಿಗೆ ಕೋಣೆಯಲ್ಲಿ ಬುಧವಾರ ರಾತ್ರಿ ಗ್ಯಾಸ್‌ ಸೋರಿಕೆ ಯಾಗಿ ಸ್ಫೋಟಗೊಂಡ ಸ್ವಲ್ಪದರಲ್ಲಿ ದೊಡ್ಡಅನಾಹುತ ತಪ್ಪಿದ ಘಟನೆ ನಡೆದಿದೆ.ಮನೆಯಲ್ಲಿ ಎಂದಿನಂತೆ ಅಡಿಗೆ ಮಾಡಿ ಗ್ಯಾಸ್ ಆಫ್, ಮಾಡಿದ್ದರು ಆದರೆ ಗ್ಯಾಸ್‌ ಸೋರಿಕೆಯಾಗುತ್ತಿರುವುದು ಅವರ ಗಮನಕ್ಕೆ ಬರಲಿಲ್ಲಸೋರಿಕೆಯಿಂದ ಸ್ಪೋಟಗೊಂಡು ಮನೆಯಡೋರ್ ಮುರಿದು ರಸ್ತೆಯಲ್ಲಿ ಸಂಚರಿಸುವ ವ್ಯಕ್ತಿಯ ಮೇಲೆ ಬಿದ್ದು ತಲೆಗೆ ಗಾಯವಾಗಿದೆ. ಗಯಗೊಂಡವರು ಲತಾ(34) ಕರಿಬಸಮ್ಮ(35) ದೇವಿರಮ್ಮ55 ಸಂತೋಷ (29) ಲತಾ (35) ಚೈತ್ರ (24) ಘಟನಾಸ್ಥಳಕ್ಕೆ ಸಿಪಿಐದೊಡ್ಡಣ್ಣ, ಪಿಎಸ್.ಐನಾಗಪ್ಪ, ಪೊಲೀಸ್ ಸಿಬ್ಬಂದಿ ಕಂದಗಲ ಕೊಟ್ರಗೌಡ, ಹೊಸಕೋಡಿ ಹಳ್ಳಿರಮೇಶ, ಅಗ್ನಿಶಾಮಕದಳದ ವಾಸುದೇವಪ್ಪ ಇತರರು ಆಗಮಿಸಿ ಪರಿಶೀಲನೆಮಾಡಿದರು.