ಕೊಟ್ಟೂರಲ್ಲಿ ಕಂಡ ಕಾಮನಬಿಲ್ಲು :

ಕೊಟ್ಟೂರು ಮೇ 19 : ಪಟ್ಟಣದಲ್ಲಿ ಸಂಜೆ ವೇಳೆ ನೀಲಾಕಾಶದಲ್ಲಿ ಏಳುಬಣ್ಣಗಳ ಕಾಮನಬಿಲ್ಲು ಗೋಚರಿಸಿದೆ. ಬಹುದಿನಗಳ ಬಳಿಕ ಆಕರ್ಷಕವಾದ ಅಪರೂಪದ ಕಾಮನಬಿಲ್ಲು ಕಂಡಿದ್ದು ಜನರಲ್ಲಿ ಖುಷಿ ಮೂಡಿಸಿದೆ. ಸಂಜೆಯ ಪರಿಸರದಲ್ಲಂತೂ ಕಾಮನಬಿಲ್ಲು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಎಂಬ ಚಿತ್ರಣ ಗೋಚರಿಸಿದೆ. ಏಳುಬಣ್ಣದ ಕಾಮನಬಿಲ್ಲು ಮೂಡಿದ್ದು ಎಲ್ಲೆಡೆ ಕಾಮನಬಿಲ್ಲಿನ ವಿಡಿಯೋ, ಚಿತ್ರಗಳು ವೈರಲ್ ಆಗಿವೆ.