ಕೊಟಗ್ಯಾಳ: ಭವಾನಿ ಭವ್ಯ ಪಲ್ಲಕ್ಕಿ ಮೆರವಣಿಗೆ

ಬೀದರ:ನ.2: ಭಾಲ್ಕಿ ತಾಲೂಕಿನ ಕೊಟಗ್ಯಾಳ ಗ್ರಾಮದಲ್ಲಿ 16ನೇ ನವರಾತ್ರಿ (ದಸರಾ) ಮಹೋತ್ಸವ ಪ್ರಯಕ್ತ ಹುಣ್ಣಿಮೆದಿನದಂದು ಅಂಬಾ ಭವಾನಿ ಭವ್ಯ ಪಲ್ಲಕ್ಕಿ ಅತಿ ವಿಜೃಭಣೆಯಿಂದ ಮೆರವಣಿಗೆ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತ್ತು.

ಮೆರವಣಿಗೆ ಉದ್ದಕ್ಕೂ ಮುತೈದರು ಕಳಸ ಹೊತ್ತಿದರು, ಕೆಲವರು ಆರುತಿ ಹಿಡಿದಿದ್ದರು, ಶಾಲಾ ಮಕ್ಕಳು ಹಾಡುಗಳ ಮೇಲೆ ಕೋಲಿನ ಕುಣಿತ, ನಾರಿಯರು ಭವಾನಿ ಹಾಡುಗಳ ಮೇಲೆ ಹೆಜ್ಜೆ ಹಾಕಿದರು, ಡಿಜಿ ಸೌಂಡ್ ಹಾಡುಗಳ ಮೇಲೆ ಯುವಕರು ಕುಣಿದು ಕೊಪ್ಪಳಿಸಿದರು ದಾರಿಯುದ್ದಕ್ಕೂ ಪಟಾಕಿ ಸಿಡಿಸಿದರು. ರಮೇಶ ಕೋಳಿ ಸಂಗೋಳಗಿ, ಶಾಂತಮ್ಮ ಡೊಣಗಾಪೂರ, ಕಲ್ಲಪ್ಪ ಹೂಗಾರ, ಕೊಟಗ್ಯಾಳ ಅಕ್ಕಮಹಾದೇವಿ ಭಜನೆ ತಂಡದವರು ದೇವಿಯ ಕುರಿತ್ತು ಹಾಡು ಹಾಡುತ್ತಾ ಹೆಜ್ಜೆ ಹಾಡಿದರು.

ಧನರಾಜ ಪೂಜಾರಿ ಮೆರವಣಿಗೆ ನೆತೃತ್ವ ವಹಿಸಿದರು sಸಾವಿರಾರು ಸಂಖ್ಯೆಯಲ್ಲಿ ಭಕ್ತದಿಗಳು ಭಾಗವಸಿದರು. ಮಾಹಾಪ್ರಸಾದ ಬಂಡೆಪ್ಪ ಕೊಳಿ ನಿಟ್ಟೂರ (ಬಿ) ಮಾಡಿದರು.

ಮೆರವಣಿಗೆ ದೇವಸ್ಥಾನದಿಂದ ಸಾಯಂಕಾಲ 7 ಗಂಟೆಗೆ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿ ಮುಖಾಂತರ ಬಸವೇಶ್ವರ ವೃತ್ತ, ದತ್ತಾತ್ರಿ ದೇವಸ್ಥಾನದ ಮೂಲಕ ರಾತ್ರಿ 11.30ಕ್ಕೆ ಗಂಟೆಗೆ ಮೆರವಣಿಗೆ ಭವಾನಿ ದೇವಸ್ಥಾನ ತಲುಪಿತ್ತು. ಇದಕ್ಕೂ ಮುನ್ನ ಬೆಳಗ್ಗೆ 6ಗಂಟೆಗೆ ದೇವಿಯ ಮಾಹಾಭಿಷೇಕ ಬೆ.10ಕ್ಕೆ ಮಾಹಾ ಅಲಂಕಾರ ನಂತರ ಮಾಹಾಪ್ರಸಾದ ನಡೆಯಿತ್ತು.