ಕೊಚ್ಚಿ‌ ವಿಮಾನ ನಿಲ್ದಾಣ: ಅಕ್ಟೋಬರ್ ತನಕ 1484 ವಿಮಾನ ಸಂಚಾರ

ಕೊಚ್ಚಿ , ಮಾ, 4- ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಬೇಸಿಗೆ ವೇಳಾಪಟ್ಟಿ ಪ್ರಕಟಿಸಿದ್ದು ಮಾರ್ಚ್ 26 ರಿಂದ ಅಕ್ಟೋಬರ್ 28 ಅವದಿಯಲ್ಲಿ ಒಟ್ಟು 1,484 ವಿಮಾನಗಳು ವಾರದ ಕಾರ್ಯಾಚರಣೆ ನಡೆಯಲಿವೆ ಎಂದು ತಿಳಿಸಿದೆ.ಚಳಿಗಾಲದ ವೇಳಾಪಟ್ಟಿಯಲ್ಲಿ 1,202 ವಿಮಾನ ಕಾರ್ಯಾಚರಣೆ ಕೊಚ್ಚಿ ವಿಮಾನ ನಿಲ್ದಾಣದಿಂದ ನಡೆದಿದ್ದವು.ಈಗ ಬೇಸಿಗೆ ಋತುವಿನಲ್ಲಿ ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಹೆಚ್ಚುವರಿ ಸೇವೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆಬೇಸಿಗೆ ವೇಳಾಪಟ್ಟಿಯ ಪ್ರಕಾರ 31 ಕ್ಕೂ ಅಧಿಕ ವಿಮಾನಯಾನ ಸಂಸ್ಥೆಗಳು 23 ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳು ವಾರಕ್ಕೆ332 ನಿರ್ಗಮನಗಳನ್ನು ಅಂತರರಾಷ್ಟ್ರೀಯ ಸ್ಥಳಗಳಿಗೆ ನಿರ್ವಹಿಸುತ್ತವೆ ಎಂದು ಕೊಚ್ಚಿ ವಿಮಾನ ನಿಲ್ದಾಣ ಲಿಮಿಟೆಡ್ ಮಾಹಿತಿ ನೀಡಿದೆ.ಇಂಡಿಗೋ ವಿಮಾನಯಾನ ಸಂಸ್ಥೆ ಅಂತರರಾಷ್ಟ್ರೀಯ ಸ್ಥಳಗಳಿಗೆ 63 ವಾರದ ನಿರ್ಗಮನಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಾರಕ್ಕೆ 44 ನಿರ್ಗಮನ ಕಾರ್ಯಾಚರಣೆಗಳನ್ನು ಹೊಂದಿದೆ.ಸ್ಪೈಸ್‌ಜೆಟ್-21, ಏರ್ ಅರೇಬಿಯಾ ಅಬುಧಾಬಿ- 20, ಏರ್‌ಏಷ್ಯಾ ಬರ್ಹಾದ್-18, ಏರ್ ಅರೇಬಿಯಾ-14, ಎಮಿರೇಟ್ಸ್ ಏರ್-14, ಎತಿಹಾದ್ ಏರ್-14, ಓಮನ್ ಏರ್-14, ಸೌದಿ ಅರೇಬಿಯನ್-14, ಸಿಂಗಾಪುರ್ ಏರ್‌ಲೈನ್ಸ್-14 ಇತರ ಪ್ರಮುಖ ವಾಹಕಗಳು ಕಾರ್ಯನಿರ್ವಹಿಸುತ್ತಿವೆ. ಆಗಾಗ್ಗೆ ಸಾಪ್ತಾಹಿಕ ಸೇವೆಗಳನ್ನು ಹೊಂದಿದೆ ಎಂದು ತಿಳಿಸಿವೆ.

ದೇಶೀಯ ಸೇವೆ ವಿಸ್ತರಣೆ;

ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾ ಮುಂಬೈಗೆ ಹೆಚ್ಚುವರಿ ದೈನಂದಿನ ವಿಮಾನಗಳನ್ನು ನಿರ್ವಹಿಸಿದರೆ, ಗೋ ಫಸ್ಟ್ ಮತ್ತು ಇಂಡಿಗೋ ಹೈದರಾಬಾದ್‌ಗೆ ವಿಮಾನಗಳನ್ನು ನಿರ್ವಹಿಸಲಿವೆ ಎಂದು ತಿಳಿಸಿದೆ.ಇಂಡಿಗೋ ಮತ್ತು ಆಕಾಶ ಏರ್ ಬೆಂಗಳೂರಿಗೆ ಪ್ರತಿನಿತ್ಯ ವಿಮಾನ ಹಾರಾಟ ನಡೆಸಲಿವೆ. ದೇಶೀಯ ವಲಯದಲ್ಲಿ,2023 ರ ಬೇಸಿಗೆ ವೇಳಾಪಟ್ಟಿಯಲ್ಲಿ ಸಾಪ್ತಾಹಿಕ ಹಾರಾಟದ ಸ್ಥಿತಿಯು ಬೆಂಗಳೂರಿಗೆ 131, ಮುಂಬೈಗೆ 73, ದೆಹಲಿಗೆ 64 ಮತ್ತು ಹೈದರಾಬಾದ್‌ಗೆ 55, ಚೆನ್ನೈಗೆ 35 ಮತ್ತು ಗುವಹಟಿ ಅಹಮದಾಬಾದ್, ಗೋವಾ, ಕಣ್ಣೂರು, ಕೋಲ್ಕತ್ತಾ, ಪುಣೆಗೆ ತಲಾ 7 ವಿಮಾನಗಳನ್ನು ಒಳಗೊಂಡಿದೆ ಎಂದು ತಿಳಿಸಲಾಗಿದೆ.