ಕೊಚ್ಚಿನ್ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಟಿ.ಹೆಚ್.ಎಂ. ಬಸವರಾಜಗೆ ಸನ್ಮಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:06: ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ, ಇತಿಹಾಸಕಾರ, ಲೇಖಕ, ಜಾನಪದ ಕಲಾವಿದ ಹಾಗೂ ಸಾಹಿತಿಗಳಾದ ಟಿ.ಹೆಚ್.ಎಂ.ಬಸವರಾಜ ಇವರಿಗೆ ಕೊಚ್ಚಿನ್ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಕೇರಳದ ಎರ್ನಾಕುಲಂನ ಟೌನ್‍ಹಾಲ್‍ನಲ್ಲಿ ಏಪ್ರಿಲ್-30 ರಂದು ಬೆಳಿಗ್ಗೆ 9.00 ರಿಂದ ನಡೆಯಲಿರುವ ಕೊಚ್ಚಿನ್ ಕನ್ನಡ ಸಂಸ್ಕøತಿ ಉತ್ಸವ 2023 ರ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಲ್ಲಿ ಬಳ್ಳಾರಿಯ ಇತಿಹಾಸಕಾರ ಟಿ.ಹೆಚ್.ಎಂ.ಬಸವರಾಜ ಇವರು ಗೌರವಾರ್ಪಣೆಗೆ ಭಾಜನರಾಗಿದ್ದಾರೆ. 75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕೊಚ್ಚಿನ್ ಕನ್ನಡ ಸಂಘ, ಕರ್ನಾಟಕ ಸರ್ಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ವಹಿಸುವರು. ಉದ್ಘಾಟನೆಯನ್ನು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|| ಸಿ.ಸೋಮಶೇಖರ ಇವರು ವಹಿಸುವರು. ಎರ್ನಾಕುಲಂ ಸಂಸದರಾದ ಹೈಬಿ ಈಡನ್, ಕೊಚ್ಚಿ ಮಹಾನಗರ ಪಾಲಿಕೆ ಮಹಾಪೌರರಾದ ನ್ಯಾಯಮೂರ್ತಿ ಎನ್.ಅನಿಲ್‍ಕುಮಾರ್, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಜಮೀಲಾ ಸಿದ್ಧೀಖ್ ದಂಡೇಗೋಳಿ, ಕೇರಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀಮತಿ ವೀಣಾಜಾರ್ಜ್, ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಬಸವರಾಜ ಸಿ.ಹೊರಟ್ಟಿ ಮುಂತಾದ ಗಣ್ಯರು ಉಪಸ್ಥಿತರಿರುವರು.